Select Your Language

Notifications

webdunia
webdunia
webdunia
webdunia

ಪಾಕ್ ರೋಗಿಗಳಿಗೆ ದೀಪಾವಳಿ ಬಂಪರ್ ಗಿಫ್ಟ್ ನೀಡಿದ ಸುಷ್ಮಾ ಸ್ವರಾಜ್

Sushma Swaraj
ನವದೆಹಲಿ , ಗುರುವಾರ, 19 ಅಕ್ಟೋಬರ್ 2017 (16:58 IST)
ನವದೆಹಲಿ: ಪಾಕಿಸ್ತಾನ ರೋಗಿಗಳಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ದೀಪಾವಳಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ.

ಭಾರತದಲ್ಲಿ ಚಿಕಿತ್ಸೆ ಪಡೆಯಲು ಇಚ್ಛಿಸಿದ ಪಾಕ್ ರೋಗಿಗಳಿಗೆ ಬಾಕಿ ಇರುವ ವೀಸಾ ನೀಡುವ ಭರವಸೆ ನೀಡಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ 'ಶುಭಕರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಾರತದಲ್ಲಿ ಚಿಕಿತ್ಸೆ ಪಡೆಯಲು ಅರ್ಹ ಪಾಕಿಸ್ತಾನ ಪ್ರಜೆಗಳಿಗೆ ವೈದ್ಯಕೀಯ ವೀಸಾ ನೀಡಲಾಗುವುದು' ಎಂದು ಟ್ವೀಟ್‌ ಮಾಡಿದ್ದಾರೆ.

ತಮ್ಮ ಪುತ್ರ ಅಬ್ದುಲ್ಲಾಗೆ ಭಾರತದಲ್ಲಿ ಲಿವರ್ ಟ್ರಾನ್ಸ್ ಪ್ಲಾಂಟೇಶನ್ ಮಾಡಿಸಲು ತಂದೆ ಕಾಸಿಫ್ ಟ್ವೀಟರ್ ಮೂಲಕ ಮನವಿ ಮಾಡಿದ್ದರು. ಇವರ ಮನವಿ ಪುರಸ್ಕರಿಸಿರುವ ಸುಷ್ಮಾ ಸ್ವರಾಜ್, ವೀಸಾ ನೀಡಲು ಒಪ್ಪಿದ್ದಾರೆ. ಪಾಕ್‌ ಪ್ರಜೆಗಳು ಪಾಕಿಸ್ತಾನದಲ್ಲಿರುವ ಭಾರತದ ಹೈಕಮೀಷನರ್‌ ರನ್ನು ಭೇಟಿಯಾಗಿ, ತಮ್ಮ ವೀಸಾ ಪಡೆಯಬಹುದು ಎಂದು ಸಹ ಟ್ವೀಟ್‌ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೋಧರು ನಮ್ಮ ಕುಟುಂಬದ ಸದಸ್ಯರಿದ್ದಂತೆ: ಪ್ರಧಾನಿ ನರೇಂದ್ರ ಮೋದಿ