Select Your Language

Notifications

webdunia
webdunia
webdunia
webdunia

24 ಗಂಟೆಯಲ್ಲಿ 3ನೇ ಬಾರಿ ಕದನ ವಿರಾಮ ಉಲ್ಲಂಘಿಸಿದ ಪಾಕ್

24 ಗಂಟೆಯಲ್ಲಿ 3ನೇ ಬಾರಿ ಕದನ ವಿರಾಮ ಉಲ್ಲಂಘಿಸಿದ ಪಾಕ್
ಜಮ್ಮು ಕಾಶ್ಮೀರ , ಶುಕ್ರವಾರ, 13 ಅಕ್ಟೋಬರ್ 2017 (13:12 IST)
ಜಮ್ಮು ಕಾಶ್ಮೀರ: ಪಾಕ್ ಪಡೆ ಮತ್ತೆ ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿವೆ. ಪೂಂಚ್‌ ಜಿಲ್ಲೆಯ ಕೃಷ್ಣಘಾಟಿ ಸೆಕ್ಟರ್ ನಲ್ಲಿ ಪಾಕ್‌ ಪಡೆ ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿವೆ.

24 ಗಂಟೆಗಳಲ್ಲಿ ಪಾಕ್‌ ಪಡೆ ನಡೆಸಿದ ಮೂರನೇ ಅಪ್ರಚೋದಿತ ಗುಂಡಿನ ದಾಳಿ ಇದಾಗಿದೆ. ಬೆಳಗ್ಗೆ 7.45ರ ಸುಮಾರಿಗೆ ಕೆಜಿ ಸೆಕ್ಟರ್ ಬಳಿ ಕದನ ವಿರಾಮ ಉಲ್ಲಂಘಿಸಿದ್ದು, ಗುಂಡಿನ ದಾಳಿ ನಡೆಸಿದೆ. ಭಾರತೀಯ ಯೋಧರು ಪಾಕ್ ಗೆ ಅತ್ಯಂತ ಪರಿಣಾಮಕಾರಿ ಗುಂಡಿನ ಉತ್ತರ ನೀಡಿದ್ದಾರೆ ಎಂದು ಸೇನಾ ವಕ್ತಾರ ತಿಳಿಸಿದ್ದಾರೆ.

ನಿನ್ನೆ ಸಹ ಪಾಕ್ ಕದನ ವಿರಾಮ ಉಲ್ಲಂಘಿಸಿದ್ದು, ಎಲ್ ಜಿ ಸೆಕ್ಟರ್ ಬಳಿ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಸ್ಥಳೀಯ ನಿವಾಸಿ ಮತ್ತು ಯೋಧ ವೀರ ಮರಣವನ್ನಪ್ಪಿದ್ದಾರೆ. ಈ ವರ್ಷದಲ್ಲಿ ಪಾಕ್ ಉಪಟಳ ತೀವ್ರ ಹೆಚ್ಚಳವಾಗಿದ್ದು ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನಾಂಬೆಯ ದರ್ಶನಕ್ಕೆ ಬಂದ ದೇವೇಗೌಡ ಕುಟುಂಬ