Webdunia - Bharat's app for daily news and videos

Install App

ಕಾರವಾರ ಬಂದರು ವಿಸ್ತರಣೆಗೆ ಸುಪ್ರೀಂ ಸೂಚನೆ

Webdunia
ಭಾನುವಾರ, 3 ಏಪ್ರಿಲ್ 2022 (11:24 IST)
ನವದೆಹಲಿ : ಬೈತ್ಕೋಲ್ ಗ್ರಾಮದಲ್ಲಿ ನಡೆಯುತ್ತಿರುವ ಕಾರವಾರ ಬಂದರು ವಿಸ್ತರಣೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಮುಂದುವರಿಸದಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.

ಈ ಪ್ರಕರಣ ಸಂಬಂಧ ಉತ್ತರಿಸುವಂತೆ ನೋಟಿಸ್ ಕೂಡಾ ಜಾರಿ ಮಾಡಿದ್ದಾರೆ. ಕಾರವಾರ ಬಂದರು ವಿಸ್ತರಣೆ ಸಂಬಂಧ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ  ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠ ನೋಟಿಸ್ ಜಾರಿ ಮಾಡಿ,

ಕಾಮಗಾರಿ ನಿಲ್ಲಿಸಬೇಕು ಎಂದು ಹೇಳಿದೆ. ಆದರೆ ಕಾಮಗಾರಿ ತಡೆಗೆ ಯಾವುದೇ ಅಧಿಕೃತ ಲಿಖಿತ ಆದೇಶಗಳನ್ನು ಪೀಠ ನೀಡಿಲ್ಲ. 

ಬೈತ್ಕೋಲ್ ಗ್ರಾಮದಲ್ಲಿ ನಡೆಯುತ್ತಿರುವ ಕಾರವಾರ ಬಂದರು ವಿಸ್ತರಣೆ ಕಾಮಗಾರಿಗೆ ತಡೆ ನೀಡುವಂತೆ ಬೈತ್ಕೋಲ್ ಬಂಡಾರು ನಿರಾಶ್ರಿತರ ಯಾಂತ್ರಿಕೃತ ದೋಣಿ ಮಿನುಗಾರರ ಸಹಕಾರ ಸಂಘ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. 

ಸಮುದ್ರದಲ್ಲಿ ಉಬ್ಬರ ಇಳಿತಗಳ ನಡುವೆ ಇರುವ ಪ್ರದೇಶವನ್ನು ಸಮತಟ್ಟು ಮಾಡಬಾರದು. ಈಗಾಗಲೇ ಕಾರವಾರದ ಶೇ 50ರಷ್ಟು ಪ್ರದೇಶವನ್ನು ಸರ್ಕಾರವು ಒಂದಲ್ಲ ಒಂದು ಯೋಜನೆಗೆ ಬಳಕೆ ಮಾಡುತ್ತಿದೆ.

ಇದೇ ರೀತಿಯಲ್ಲಿ ಬಂದರು ವಿಸ್ತರಣೆ ಮಾಡಬಾರದು ಕಾರವಾರದ ಹಲವು ಕಡಲ ತೀರಗಳನ್ನು ಈಗಾಗಲೇ ನೌಕಾನೆಲೆ ಸ್ಥಾಪನೆಗೆಂದು ಬಿಟ್ಟುಕೊಡಲಾಗಿದೆ.

ಕಾರವಾರದಲ್ಲಿ ಬಂದರು ವಿಸ್ತರಣೆಯಿಂದ ಮೀನುಗಾರಿಕೆಗೆ ಬಹಳ ತೊಂದರೆಯಾಗಲಿದೆ. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಮುಂದುವರಿಸಬಾರದು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments