ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಸನ್ನಿ ಲಿಯೋನ್

geetha
ಭಾನುವಾರ, 18 ಫೆಬ್ರವರಿ 2024 (20:18 IST)
ಲಖನೌ-ಉತ್ತರ ಪ್ರದೇಶ ಪೊಲೀಸ್‌ ನೇಮಕಾತಿ ಪರೀಕ್ಷೆಗೆ ಸನ್ನಿ ಲಿಯೋನ್‌ ಹೆಸರಲ್ಲಿ ಅರ್ಜಿ ಹಾಕಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶ ಪೊಲೀಸ್‌ ನೇಮಕಾತಿಯ ಹಾಲ್‌ ಟಿಕೆಟ್‌ನಲ್ಲಿ ಸನ್ನಿ ಲಿಯೋನ್‌ ಫೋಟೊ ಕಾಣಿಸಿಕೊಂಡಿದ್ದು, ಹಾಲ್ ಟಿಕೆಟ್ ಇದೀಗ ವೈರಲ್‌  ಆಗಿದೆ.ಶ-ವಿದೇಶಗಳಲ್ಲಿ‌ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಾದಕ ನಟಿ ಸನ್ನಿ ಲಿಯೋನ್‌ ಉತ್ತರ ಪ್ರದೇಶದಲ್ಲಿ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. 

ಸನ್ನಿ ಲಿಯೋನ್‌ ಅಭಿಮಾನಿಯೊಬ್ಬ ಅವರ ಹೆಸರಿನಲ್ಲಿಯೇ ಉತ್ತರ ಪ್ರದೇಶ ಪೊಲೀಸ್‌ ನೇಮಕಾತಿ ಪರೀಕ್ಷೆಗೆ ಅರ್ಜಿ ಹಾಕಿದ್ದಾನೆ. ಈಗ ರಾಜ್ಯ ಸರ್ಕಾರವು ಸನ್ನಿ ಲಿಯೋನ್‌ ಹೆಸರಿನಲ್ಲಿ ಹಾಲ್‌ ಟಿಕೆಟ್‌ ಬಿಡುಗಡೆ ಮಾಡಿದ್ದು, ಅವವರಿಗೆ ಕನೌಜ್‌ ಜಿಲ್ಲೆಯ ತಿರ್ವಾದಲ್ಲಿರುವ ಶ್ರೀಮತಿ ಸೋನೆಶ್ರೀ ಮೆಮೋರಿಯಲ್‌ ಗರ್ಲ್ಸ್‌ ಕಾಲೇಜ್‌ಅನ್ನು ಪರೀಕ್ಷಾ ಕೇಂದ್ರವನ್ನಾಗಿ ನೀಡಲಾಗಿದೆ.

ಹಾಲ್‌ ಟಿಕೆಟ್‌ ನಲ್ಲಿ ನೋಂದಣಿಯಾದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ, ಉತ್ತರ ಪ್ರದೇಶದ ಮಹೋಬಾ ಎಂಬಲ್ಲಿ ಮೊಬೈಲ್‌ ಸಂಖ್ಯೆ ನೋಂದಣಿಯಾಗಿದೆ. ಇನ್ನು, ನೋಂದಣಿಗೆ ಮುಂಬೈ  ವಿಳಾಸ ನೀಡಲಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಸನ್ನಿ ಲಿಯೋನ್‌ ಹೆಸರಿನಲ್ಲಿ ಅರ್ಜಿ ಹಾಕಿದವರು ಫೆಬ್ರವರಿ 17ರಂದು ಪರೀಕ್ಷೆ ಬರೆಯಬೇಕಿತ್ತು. ಆದರೆ, ಯಾರೂ ಪರೀಕ್ಷೆಗೆ ಹಾಜರಾಗಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿಯು ಮಾಹಿತಿ ನೀಡಿದೆ.
 
ಸರ್ಕಾರಿ ಹುದ್ದೆಗಳಿಗೆ ಈ ರೀತಿಯ ಫೇಕ್ ಅರ್ಜಿಗಳನ್ನು ಹಾಕಿ ಆಟವಾಡುವವರ ವಿರುದ್ಧ ಕ್ರಮ‌ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಕೆಲವರು, ಸನ್ನಿಗೆ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವಂತ ಗತಿ ಏಕೆ ಬಂತು ಎಂದು ತಮಾಷೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ತುಪ್ಪ‌ ಮಾರಾಟ ಜಾಲದ ಕಿಂಗ್‌ ಪಿನ್‌ ದಂಪತಿ ಸಿಸಿಬಿ ಬಲೆಗೆ

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾವು ವದಂತಿ: ಅಡಿಯಾಲಾ ಜೈಲಿನ ಮುಂದೆ ಹೈಡ್ರಾಮಾ

ಈ ವಿಚಾರಕ್ಕೆ ರಾಹುಲ್, ಸೋನಿಯಾ ಭೇಟಿಯಾಗಬೇಕೆಂದ ಮಲ್ಲಿಕಾರ್ಜುನ ಖರ್ಗೆ

ದೆಹಲಿ ಸ್ಪೋಟ, ಇಂದು ಬಂಧಿಯಾಗಿರುವ ಆರೋಪಿಯ ಕೈವಾಡ ಕೇಳಿದ್ರೆ ಶಾಕ್ ಆಗುತ್ತೆ

ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಬಿಗ್‌ ರಿಲೀಫ್‌, ತೀರ್ಪು ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ