Select Your Language

Notifications

webdunia
webdunia
webdunia
webdunia

ಷೇರು ಮಾರುಕಟ್ಟೆ : ಹೂಡಿಕೆದಾರರಿಗೆ 7 ಲಕ್ಷ ಕೋಟಿ ನಷ್ಟ!

ಷೇರು ಮಾರುಕಟ್ಟೆ : ಹೂಡಿಕೆದಾರರಿಗೆ 7 ಲಕ್ಷ ಕೋಟಿ ನಷ್ಟ!
ಮುಂಬೈ , ಮಂಗಳವಾರ, 27 ಸೆಪ್ಟಂಬರ್ 2022 (13:36 IST)
ಮುಂಬೈ : ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿದೆ.

ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ ಅಂಕಗಳು ಭಾರೀ ಇಳಿಕೆಯಾಗಿದ್ದರಿಂದ ಒಂದೇ ದಿನ ಹೂಡಿಕೆದಾರರು ಸುಮಾರು 7 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ.

ಶುಕ್ರವಾರ 58,098 ಅಂಕದಲ್ಲಿ  ಕೊನೆಯಾಗಿದ್ದ ಸೆನ್ಸೆಕ್ಸ್ ಇಂದು ಆರಂಭದ ಎರಡು ಗಂಟೆಯಲ್ಲಿ 1 ಸಾವಿರ ಅಂಕ ಇಳಿಕೆಯಾಗಿತ್ತು. ಬಳಿಕ ನಿಧನವಾಗಿ ಚೇತರಿಕೆ ಕಂಡಿತು. ಅಂತಿಮವಾಗಿ 953 ಅಂಕ ಇಳಿಕೆಯಾಗಿ ದಿನದ ಕೊನೆಯಲ್ಲಿ 57,145 ಅಂಕಗಳಿಗೆ ವ್ಯವಹಾರವನ್ನು ಕೊನೆಗೊಳಿಸಿತು.

ಶುಕ್ರವಾರ 17,327 ಅಂಕದಲ್ಲಿ ಕೊನೆಯಾಗಿದ್ದ ನಿಫ್ಟಿ ಇಂದು 311ಅಂಕ ಇಳಿಕೆಯಾಗಿ 17,016 ಅಂಕಗಳಿಗೆ ಕೊನೆಯಾಯಿತು. 


Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ಥಾನಕ್ಕೆ ತೆರಳುತ್ತಿದ್ದವರು ಮಸಣಕ್ಕೆ!