ಸಾವರ್ಕರ್ ಕುರಿತು ಹೇಳಿಕೆ: ವಿಚಾರಣೆಗೆ ಗೈರಾದ ರಾಹುಲ್‌ ಗಾಂಧಿಗೆ ಬಿತ್ತು ದಂಡ, ಎಷ್ಟು ಗೊತ್ತಾ

Sampriya
ಬುಧವಾರ, 5 ಮಾರ್ಚ್ 2025 (19:10 IST)
Photo Courtesy X
ಲಕ್ನೋ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧದ ಪ್ರಕರಣದ ವಿಚಾರಣೆಗೆ ಗೈರು ಹಾಜರಾಗಿದ್ದಕ್ಕಾಗಿ ಲಕ್ನೋ ಕೋರ್ಟ್‌ ಅವರಿಗೆ ₹200 ದಂಡ ವಿಧಿಸಿದೆ.

 2022 ರಲ್ಲಿ ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ವಿರುದ್ಧ ಹೇಳಿಕೆಗೆ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ದೂರುದಾರರ ವಕೀಲರಿಗೆ ಹಣವನ್ನು ನೀಡುವಂತೆ ಸೂಚಿಸಿದೆ.

ರಾಹುಲ್ ಸಾವರ್ಕರ್ ಅವರನ್ನು ‘ಬ್ರಿಟಿಷರ ಸೇವಕ’ ಎಂದು ಕರೆದಿದ್ದಾರೆ ಎಂದು ದೂರುದಾರ ನೃಪೇಂದ್ರ ಪಾಂಡೆ ಪರ ವಕೀಲರು ಹೇಳಿದ್ದಾರೆ.  ರಾಹುಲ್ ಪತ್ರಿಕಾಗೋಷ್ಠಿಗೂ ಮುನ್ನ ಸಾವರ್ಕರ್ ಅವರನ್ನು ಕೀಳಾಗಿ ಹೇಳುವ ಕರಪತ್ರಗಳನ್ನು ಹಂಚಲಾಗಿತ್ತು ಎಂದು ಅವರು ಹೇಳಿದ್ದಾರೆ.

ರಾಹುಲ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಸಂಬಂಧ ರಾಹುಲ್ ವಿರುದ್ಧ ದ್ವೇಷ ಹರಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.

ಸಂಸತ್ತಿನ ನಡೆಯುತ್ತಿರುವ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ ಮತ್ತು ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ರಾಹುಲ್ ಪರ ವಕೀಲರು ತಿಳಿಸಿದ್ದಾರೆ.

ಈ ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕವನ್ನು ಏಪ್ರಿಲ್ 14 ಎಂದು ನ್ಯಾಯಾಲಯ ನಿಗದಿಪಡಿಸಿದೆ ಮತ್ತು ಕಾಂಗ್ರೆಸ್ ನಾಯಕನ ಗೈರುಹಾಜರಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಸಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವೋಟ್ ಚೋರಿ ಚರಿತ್ರೆಯನ್ನೇ ಹೊಂದಿರುವ ಕಾಂಗ್ರೆಸ್ ಗೆ ಬಿಜೆಪಿ ಮೇಲೆ ಆರೋಪಿಸಲು ನೈತಿಕತೆಯಿಲ್ಲ: ಸಿಟಿ ರವಿ

ಹಿಂದೂಗಳ ಪವಿತ್ರ ಕಾರ್ತಿಕ ದೀಪಕ್ಕೆ ಅನುಮತಿ ನೀಡಿದ ಜಡ್ಜ್ ವಿರುದ್ಧ ಸಹಿ ಹಾಕಿದ ರಾಜ್ಯದ ಮೂವರು ಕೈ ಸಂಸದರು ಇವರೇ

ಡಿನ್ನರ್ ಮೀಟಿಂಗ್ ನಡುವೆ ಸಿಎಂ, ಡಿಸಿಎಂಗೆ ದೆಹಲಿ ಬುಲಾವ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments