ನೀವು ಸೆಲೆಬ್ರಿಟಿಯಾಗಿರಬಹುದು, ಅದೆಲ್ಲಾ ಇಲ್ಲಿ ನಡೆಯಲ್ಲ: ಜಯಾ ಬಚ್ಚನ್ ಗೆ ಸ್ಪೀಕರ್ ಜಗದೀಪ್ ಧನಕರ್ ಕ್ಲಾಸ್

Krishnaveni K
ಶುಕ್ರವಾರ, 9 ಆಗಸ್ಟ್ 2024 (14:46 IST)
Photo Credit: Facebook
ನವದೆಹಲಿ: ಕಳೆದ ವಾರ ಸಂಸತ್ತಿನಲ್ಲಿ ತಮ್ಮ ಹೆಸರಿನ ಜೊತೆ ಅಮಿತಾಭ್ ಬಚ್ಚನ್ ಎಂದು ಸೇರಿಸಿದ್ದಕ್ಕೆ ತಕರಾರು ತೆಗೆದಿದ್ದ ಸಂಸದೆ ಜಯಾ ಬಚ್ಚನ್ ಮತ್ತೊಮ್ಮೆ ಇಂದು ಇದೇ ವಿಚಾರಕ್ಕೆ ರಾಜ್ಯ ಸಭೆಯಲ್ಲಿ ಸ್ಪೀಕರ್ ಜಗದೀಪ್ ಧನಕರ್ ಜೊತೆ ವಾಗ್ವಾದ ನಡೆಸಿದರು.

ಜಯಾ ಅವರನ್ನು ಇಂದು ಸ್ಪೀಕರ್ ಜಗದೀಪ್ ಧನಕರ್ ‘ಜಯಾ ಅಮಿತಾಭ್ ಬಚ್ಚನ್’ ಎಂದು ಕರೆದರು. ಇದರಿಂದ ಸಿಟ್ಟಿಗೆದ್ದ ಜಯಾ ‘ಸ್ಪೀಕರ್ ಸರ್ ನನ್ನನ್ನು ಕ್ಷಮಿಸಿ. ಆದರೆ ನಿಮ್ಮ ಮಾತಿನ ಧಾಟಿ ಸರಿ ಇಲ್ಲ’ ಎಂದಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಸ್ಪೀಕರ್ ಧನಕರ್, ನೀವು ಸೆಲೆಬ್ರಿಟಿಯಾಗಿರಬಹುದು. ಆದರೆ ಇಲ್ಲಿ ಕೆಲವೊಂದು ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತ್ತದೆ ಎಂದರು.

ಜಯಾರನ್ನು ಕುಳಿತುಕೊಳ್ಳಲು ಸೂಚಿಸಿದ ಸ್ಪೀಕರ್ ಧನಕರ್ ನೀವು ನನಗೆ ಪಾಠ ಮಾಡಲು ಬರಬೇಡಿ ಎಂದರು. ಈ ವೇಳೆ ಜಯಾ ಬಚ್ಚನ್ ಕೂಡಾ ವಾಗ್ವಾದ ನಡೆಸಿದ್ದು ಇದು ತುಂಬಾ ಅವಮಾನಕರ ಅನುಭವ. ಈ ವಿಚಾರದಲ್ಲಿ ಸ್ಪೀಕರ್ ಕ್ಷಮೆ ಯಾಚಿಸಬೇಕು ಎಂದು ಜಯಾ ಪಟ್ಟು ಹಿಡಿದರು.

ಜಯಾಗೆ ಬೆಂಬಲ ಕೋರಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಪಕ್ಷ ಸದಸ್ಯರು ಸಭಾ ತ್ಯಾಗ ಮಾಡಿದ್ದಾರೆ. ಜಯಾ ನಾಲ್ಕು ಬಾರಿ ಸಂಸದೆಯಾಗಿ ಆಯ್ಕೆಯಾದವರು. ಅವರಿಗೆ ಅವಮಾನವಾಗುವುದು ಸಹಿಸಲ್ಲ. ಸ್ಪೀಕರ್ ಕ್ಷಮೆ ಕೇಳಲೇಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಕಳೆದ ವಾರವೂ ಸಂಸತ್ ನಲ್ಲಿ ಸ್ಪೀಕರ್ ಹರಿವಂಶ್ ನಾರಾಯಣ್ ಸಿಂಗ್ ಅವರಿಗೆ ‘ನನ್ನನ್ನು ಜಯಾ ಬಚ್ಚನ್ ಎಂದು ಕರೆದರೆ ಸಾಕು’ ಎಂದು ಖಡಕ್ ಆಗಿ ಹೇಳಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆ, ಮಕ್ಕಳ ಮೇಲೆ ಪರಿಣಾಮವೇನು ಗೊತ್ತಾ

ದುಬೈ ಏರ್ ಶೋ ದುರಂತ, ತಾಯ್ನಾಡಿಗೆ ಪೈಲೆಟ್ ನಮನ್ಶ್‌ ಸಿಯಾಲ್ ಪಾರ್ಥಿವ ಶರೀರ

ಕರೂರು ಕಾಲ್ತುಳಿತ ಬೆನ್ನಲ್ಲೇ ಪಕ್ಷದ ಮುಖಂಡರ ಸಭೆ ಕರೆದ ನಟ ವಿಜಯ್

ಸುಪ್ರೀಂಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್‌ ನಾಳೆ ಪ್ರಮಾಣ ಸ್ವೀಕಾರ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತಷ್ಟು ಕಳಪೆ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ

ಮುಂದಿನ ಸುದ್ದಿ
Show comments