Select Your Language

Notifications

webdunia
webdunia
webdunia
webdunia

ಆಫ್ರಿಕಾದ ಅತಿ ಎತ್ತರದ ಪರ್ವತವೇರಿದ ಸೋನು ಸೂದ್

ಆಫ್ರಿಕಾದ ಅತಿ ಎತ್ತರದ ಪರ್ವತವೇರಿದ  ಸೋನು ಸೂದ್
ನವದೆಹಲಿ , ಗುರುವಾರ, 19 ಆಗಸ್ಟ್ 2021 (08:00 IST)
ಭಾರತದ ಪರ್ವತಾರೋಹಿ ಉಮಾ ಸಿಂಗ್ ಅವರು ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಮೌಂಟ್ ಕಿಲಿಮಾಂಜರೋದ ತುತ್ತ ತುದಿ ಏರಿದ್ದಾರೆ. ಶಿಖರದ ತುದಿಯಲ್ಲಿ ನಿಂತು ಬಾಲಿವುಡ್ ನಟ ಸೋನು ಸೂದ್ ಚಿತ್ರ ಹಿಡಿದು ತಮ್ಮದೊಂದು ಫೋಟೋ ತೆಗೆದುಕೊಂಡು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ ಉಮಾ ಸಿಂಗ್.

"ಆಗಸ್ಟ್ 5ರಂದು ನಾನು ಆಫ್ರಿಕಾ ಖಂಡದ ಅತಿ ಎತ್ತರದ ಶಿಖರವಾದ ಮೌಂಟ್ ಕಿಲಿಮಾಂಜರೋವನ್ನು ಬೈಸಿಕಲ್ನಲ್ಲಿ ಏರಿದ್ದೆ. ಅದಾಗಲೇ ಟಾಪ್ನಲ್ಲಿರುವ ವ್ಯಕ್ತಿ, ಏಕೈಕ ರಿಯಲ್ ಹೀರೋ ಸೋನು ಸೂದ್ ಸರ್ಗೆ ಈ ವಿಜಯವನ್ನು ಅರ್ಪಿಸುತ್ತಿದ್ದೇನೆ. ಯಾವಾಗಲೂ ಸ್ಪೂರ್ತಿಯಾಗಿರುವ ಸೋನು ಸರ್ಗೆ ಧನ್ಯವಾದ" ಎಂದು ಉಮಾ ಸಿಂಗ್ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಸೋನು ಸೂದ್, "ವಾವ್. ನಾನು ಸಹ ಮೌಂಟ್ ಕಿಲಿಮಾಂಜರೋ ಏರಿದ್ದೆ ಎಂದು ಹೇಳಬಹುದು. ಬಹಳ ಹೆಮ್ಮೆಯಾಗುತ್ತಿದೆ ಉಮಾ" ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರೀಯ ಶಿಕ್ಷಣ ನೀತಿ ಹಿಂದೆ ವಿದ್ಯಾರ್ಥಿ ಹಿತ ಮಾತ್ರ; ಇದೇ 23ರಿಂದಲೇ ಪ್ರವೇಶ ಪ್ರಕ್ರಿಯೆ ಆರಂಭ