Select Your Language

Notifications

webdunia
webdunia
webdunia
webdunia

ಭಾರತಕ್ಕೆ ಕಂಚು: ಕಿರಿಯರ ವಿಶ್ವಕಪ್ ಅಥ್ಲೆಟಿಕ್ಸ್ ನಲ್ಲಿ ಇತಿಹಾಸ

ಭಾರತಕ್ಕೆ ಕಂಚು: ಕಿರಿಯರ ವಿಶ್ವಕಪ್ ಅಥ್ಲೆಟಿಕ್ಸ್ ನಲ್ಲಿ ಇತಿಹಾಸ
bengaluru , ಬುಧವಾರ, 18 ಆಗಸ್ಟ್ 2021 (21:06 IST)
ಭಾರತ ಯುವಕರ ತಂಡ 4X400ಮೀ. ರಿಲೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮಿಶ್ರ ವಿಭಾಗದ ಕಿರಿಯರ ವಿಶ್ವಕಪ್ ಅಥ್ಲೆಟಿಕ್ಸ್ ನಲ್ಲಿ ಇತಿಹಾಸ ನಿರ್ಮಿಸಿದೆ.
ನೈರೋಬಿಯಲ್ಲಿ ಬುಧವಾರ ನಡೆದ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ನ
ರಿಲೇಯಲ್ಲಿ ಭಾರತ ಕಂಚಿನ ಪದಕ ಗೆಲ್ಲುವ ಮೂಲಕ ಒಟ್ಟಾರೆ 5 ಪದಕ ಗೆದ್ದ ಸಾಧನೆ ಮಾಡಿದೆ.
ಭಾರತ್ ಎಸ್., ಪ್ರಿಯಾ ಮೋಹನ್, ಸಮ್ಮಿ ಮತ್ತು ಕಪಿಲ್ ಅವರನ್ನೊಳಗೊಂಡ ಭಾರತ ತಂಡ 3:20:60 ನಿಮಿಷದಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಪಡೆಯಿತು. ನೈಜಿರಿಯಾ ತಂಡ 3:19:70 ನಿಮಿಷದಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗೆದ್ದರೆ 3:19:80 ಬೆಳ್ಳಿ ಪದಕ ಗೆದ್ದುಕೊಂಡಿತು.
ಭಾರತ ಅತ್ಯುತ್ತಮ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿತ್ತು. ಆದರೆ ಕೊನೆಯ ಹಂತದಲ್ಲಿ ಎಡವಿದ್ದರಿಂದ ಬೆಳ್ಳಿ ಪದಕ ಗೆಲ್ಲುವ ಅವಕಾಶದಿಂದ ವಂಚಿತವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಟೆಸ್ಟ್ ರ್ಯಾಂಕಿಂಗ್​: ಕೆಎಲ್ ರಾಹುಲ್, ಸಿರಾಜ್ ಭಾರೀ ಜಿಗಿತ