Publish Date: Thu, 07 Sep 2017 (08:17 IST)
Updated Date: Thu, 07 Sep 2017 (08:19 IST)
ನವದೆಹಲಿ: ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿಯವರಿಗೆ ರಕ್ಷಣೆ ಒದಗಿಸುವ ಎಸ್ ಪಿಎಜೆ ಕಮಾಂಡೋ ಒಬ್ಬರು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದಾರೆ.
ಸೆಪ್ಟೆಂಬರ್ 3 ರಿಂದ ರಾಕೇಶ್ ಕುಮಾರ್ ಎಂಬ ಭದ್ರತಾ ಕಮಾಂಡೋ ಕಣ್ಮರೆಯಾಗಿದ್ದಾರೆ. ಕೊನೆಯ ಬಾರಿಗೆ ಈತ ಸೆಪ್ಟೆಂಬರ್ 1 ರಂದು ಸೋನಿಯಾ ನಿವಾಸದಲ್ಲಿ ಕರ್ತವ್ಯ ನಿರ್ವಹಿಸಿದ್ದ. ಅಂದು ಆತನಿಗೆ ರಜೆಯಿದ್ದರೂ ಕರ್ತವ್ಯ ನಿರ್ವಹಿಸಿದ್ದ ಎನ್ನುವುದು ನಂತರ ಪತ್ತೆಯಾಗಿತ್ತು.
ಆದರೆ ರಜೆ ದಿನವೂ ಆತ ಕರ್ತವ್ಯ ನಿರ್ವಹಿಸಿದ್ದು ಏಕೆ ಎಂಬುದು ಪ್ರಶ್ನಾರ್ಥಕವಾಗಿದೆ. ಈತನ ರಿವಾಲ್ವರ್ ಮೊಬೈಲ್ ಫೋನ್ ಎಲ್ಲವನ್ನೂ ತಮ್ಮ ಜತೆಗೆ ಕರೆದೊಯ್ದಿದ್ದಾರೆ. ಹೀಗಾಗಿ ಅವರ ಇರುವಿಕೆ ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟವಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ