Select Your Language

Notifications

webdunia
webdunia
webdunia
webdunia

ಗೌರಿ ಲಂಕೇಶ್ ಹತ್ಯೆಗೂ ಬಿಜೆಪಿಗೂ ಸಂಬಂಧವಿಲ್ಲ: ನಿತೀನ್ ಗಡ್ಕರಿ

ಗೌರಿ ಲಂಕೇಶ್ ಹತ್ಯೆಗೂ ಬಿಜೆಪಿಗೂ ಸಂಬಂಧವಿಲ್ಲ: ನಿತೀನ್ ಗಡ್ಕರಿ
ನವದೆಹಲಿ , ಬುಧವಾರ, 6 ಸೆಪ್ಟಂಬರ್ 2017 (18:40 IST)
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಬಿಜೆಪಿಯ ಕೈವಾಡ ಎನ್ನುವುಂತೆ ಬಿಂಬಿಸುತ್ತಿರುವುದು ದುರದೃಷ್ಟಕರ ಸಂಗತಿ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಆರೋಪಗಳು ಬೇಜವಾಬ್ದಾರಿ, ಆಧಾರರಹಿತ ಮತ್ತು ಸುಳ್ಳಿನ ಕಂತೆ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ತಿರುಗೇಟು ನೀಡಿದ್ದಾರೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರವಾಗಲಿ, ಬಿಜೆಪಿಯಾಗಲಿ ಅಥವಾ ಬಿಜೆಪಿಗೆ ಸಂಬಂಧಪಟ್ಟ ಯಾವುದೇ ಸಂಘಟನೆಗಳಾಗಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ನಮ್ಮ ಸಮಾಜದಲ್ಲಿ ಅಸಹಕಾರ ಮತ್ತು ಧರ್ಮಾಂಧತೆಯಂತಹ ಕೊಳಕನ್ನು ಹೆಚ್ಚಿಸುತ್ತಿದೆ ಎನ್ನುವ ಸೋನಿಯಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಿ ಇಂತಹ ಬೇಜವಾಬ್ದಾರಿಯುತ, ಆಧಾರವಿಲ್ಲದ ಮತ್ತು ಸುಳ್ಳು ಹೇಳಿಕೆಯನ್ನು ನೀಡುವುದು ಅವರ ಘನತೆಗೆ ತಕ್ಕುದಲ್ಲ ಎಂದು ತಿಳಿಸಿದ್ದಾರೆ.
 
ಕೆಲವು ರಾಜಕೀಯ ಪಕ್ಷಗಳು ಕೇಂದ್ರ ಸರಕಾರದ ಬಗ್ಗೆ ನೀಡುತ್ತಿರುವ ಹೇಳಿಕೆಗಳು ದುರದೃಷ್ಟಕರ ಮತ್ತು ಆಕ್ಷೇಪಾರ್ಹವಾಗಿದೆ. ಘಟನೆಯನ್ನು ಈಗಾಗಲೇ ಬಿಜೆಪಿ ನಾಯಕರು ಖಂಡಿಸಿದ್ದಾರೆ ಎಂದರು.
 
ಪ್ರಧಾನಮಂತ್ರಿ ಮೋದಿ ನಾಯಕತ್ವದಲ್ಲಿ ಬಿಜೆಪಿ ಉತ್ತಮ ಅಡಳಿತ ನೀಡುತ್ತಿರುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಬಿಜೆಪಿಯೆಂದರೆ ಅಲರ್ಜಿ. ಆದ್ದರಿಂದ ಇಂತಹ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಾರೆ ಎಂದು ಮಾಜಿ ಬಿಜೆಪಿ ಅಧ್ಯಕ್ಷ ನಿತೀನ್ ಗಡ್ಕರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಆರ್.ಅಶೋಕ್ ಆಗ್ರಹ