Publish Date: Mon, 03 Jun 2024 (13:57 IST)
Updated Date: Mon, 03 Jun 2024 (13:59 IST)
ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಂದಿರುವ ವರದಿಗಳೆಲ್ಲಾ ಉಲ್ಟಾ ಹೊಡೆಯಲಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಲೋಕಸಭೆ ಚುನಾವಣೆ 2024 ಎಕ್ಸಿಟ್ ಪೋಲ್ ಫಲಿತಾಂಶಗಳು ಮತ್ತೆ ಎನ್ ಡಿಎ ಅಧಿಕಾರಕ್ಕೆ ಬರಲಿದೆ ಎಂದು ಸೂಚಿಸುತ್ತಿದೆ. ಆಧರೆ ಇದನ್ನು ಕಾಂಗ್ರೆಸ್ ಒಪ್ಪಿಕೊಳ್ಳಲು ತಯಾರಿಲ್ಲ. ರಾಹುಲ್ ಗಾಂಧಿ ಈಗಾಗಲೇ ಇದು ಮೋದಿ ಬೆಂಬಲಿತ ಮಾಧ್ಯಮಗಳ ಸೃಷ್ಟಿ ಎಂದಿದ್ದಾರೆ.
ಇದೀಗ ಎಕ್ಸಿಟ್ ಪೋಲ್ ವರದಿಗಳ ಬಗ್ಗೆ ಮೊದಲ ಬಾರಿಗೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಕಾದು ನೋಡಿ ಎಲ್ಲವೂ ನಮ್ಮ ನಿರೀಕ್ಷೆಯಂತೇ ನಡೆಯಲಿದೆ. ಎಕ್ಸಿಟ್ ಪೋಲ್ ನಲ್ಲಿ ಬಂದ ಫಲಿತಾಂಶದ ಪಕ್ಕಾ ಉಲ್ಟಾ ಫಲಿತಾಂಶ ನಾಳೆ ಸಿಗಲಿದೆ ಎಂದಿದ್ದಾರೆ.
ಈಗಾಗಲೇ ಬಂದಿರುವ ಎಕ್ಸಿಟ್ ಪೋಲ್ ವರದಿಗಳಲ್ಲಿ ಎನ್ ಡಿಎ ಮೈತ್ರಿ ಕೂಟ 300 ಪ್ಲಸ್ ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಸ್ಥಾನ ಹೆಚ್ಚಿಸಿಕೊಂಡರೂ ಇಂಡಿಯಾ ಮೈತ್ರಿ ಕೂಟ 150-160 ಸ್ಥಾನ ಗೆಲ್ಲಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಆದರೆ ಇದೆಲ್ಲವೂ ಉಲ್ಟಾ ಆಗಲಿದೆ ಎಂದು ಸೋನಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.