Select Your Language

Notifications

webdunia
webdunia
webdunia
webdunia

ರಾಹುಲ್‌ಗೆ ನಾನು ನೀಡಿದ ಪ್ರೀತಿಯನ್ನು ನೀವು ನೀಡಿ: ಸೋನಿಯಾ ಗಾಂಧಿ ಮತಯಾಚನೆ

Congress Leader Rahul Gandhi

Sampriya

ಉತ್ತರ ಪ್ರದೇಶ , ಶುಕ್ರವಾರ, 17 ಮೇ 2024 (19:07 IST)
Photo Courtesy X
ಉತ್ತರ ಪ್ರದೇಶ: ಇಂದು ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಪರ ಅವರ ತಾಯಿ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು  ಪ್ರಚಾರ ನಡೆಸಿ, ನನ್ನ ಮಗನನ್ನು ನಿಮ್ಮ ಕೈಗೆ ನೀಡುತ್ತಿದ್ದೇನೆ. ನಾನು ನೀಡಿದ ಪ್ರೀತಿಯನ್ನು ಅವನಿಗೆ ನೀವು ನೀಡಿ ಹಾರೈಸಿ ಎಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಅವರು, ನಮ್ಮ ಕುಟುಂಬದ ಬೇರುಗಳು ಈ ನೆಲದ ಮಣ್ಣಿನೊಂದಿಗೆ ಸಂಪರ್ಕ ಹೊಂದಿದ್ದು ಗಂಗಾ ಮಾತೆಯಷ್ಟು ಪರಿಶುದ್ಧ ಎಂದರು.

ನಿಮ್ಮ ಪ್ರೀತಿ ನನ್ನ ಏಕಾಂಗಿಯಾಗಿ ಮಾಡಿಲ್ಲ. ನನ್ನ ಬಳಿ ಇರುವುದೆಲ್ಲ ನಿಮ್ಮದೇ. ಈಗ ನನ್ನ ಮಗನನ್ನು ನಿಮಗೆ ನೀಡುತ್ತಿದ್ದೇನೆ. ನಾನು ನೀಡಿದಂತೆ ಅವನಿಗೂ ನೀವು ಪ್ರೀತಿ ನೀಡಿ. ರಾಹುಲ್ ನಿಮ್ಮ ಆಶಯಗಳಿಗೆ ಎಂದಿಗೂ ನಿರಾಶೆ ಮಾಡುವುದಿಲ್ಲ ಎಂದು ಜನರಲ್ಲಿ ಮನವಿ ಮಾಡಿದರು.

ಇಂದಿರಾಗಾಂಧಿ ಮತ್ತು ರಾಯ್‌ಬರೇಲಿ ಜನರು ನನಗೆ ಕಲಿಸಿದ ಪಾಠವನ್ನೇ ನಾನು ರಾಹುಲ್ ಮತ್ತು ಪ್ರಿಯಾಂಕಾ ಅವರಿಗೆ ಕಲಿಸಿದ್ದೇನೆ. 20 ವರ್ಷಗಳ ಕಾಲ ಸಂಸದೆಯಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ್ದೀರಿ.  ಇದು ನನ್ನ ಜೀವನದ ದೊಡ್ಡ ಆಸ್ತಿ ಎಂದು ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೋಮವರಾದವರೆಗೆ ರೇವಣ್ಣಗೆ ಮಧ್ಯಂತರ ಜಾಮೀನು ಮುಂದೂಡಿಕೆ