Select Your Language

Notifications

webdunia
webdunia
webdunia
webdunia

ರಿಲ್ಯಾಕ್ಸ್‌ ಮೂಡ್‌ಗೆ ಜಾರಲು ಊಟಿಗೆ ಪ್ರಯಾಣ ಬೆಳೆಸಿದ ಸಿದ್ದರಾಮಯ್ಯ

Chief Minister Siddaramaiah

Sampriya

ಬೆಂಗಳೂರು , ಮಂಗಳವಾರ, 7 ಮೇ 2024 (18:10 IST)
Photo Courtesy X
ಬೆಂಗಳೂರು: ರಾಜ್ಯದಲ್ಲಿ ಇಂದು ಎರಡನೇ ಹಂತದ ಲೋಕಸಭೆ ಚುನಾವಣೆಯ ಮತದಾನ ಮುಗಿದಿದೆ. ಇನ್ನೇನಿದ್ದರು ಜೂನ್ 4ರಂದು ನಡೆಯುವ ಮತ ಏಣಿಕೆಯತ್ತ ಜನರ ದೃಷ್ಟಿ ನೆಟ್ಟಿದೆ.

ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಸಂಚರಿಸಿ ಸುಸ್ತಾಗಿರುವ ಸಿಎಂ ಸಿದ್ದರಾಮಯ್ಯ ಅವರು ರಿಲ್ಯಾಕ್ಸ್‌ ಮೂಡಿಗೆ ಜಾರಲು ಇಂದು ಕುಟುಂಬ ಸಮೇತ ಊಟಿಗೆ ತೆರಳಿದ್ದಾರೆ.

ಅವರು ಹೆಚ್‍ಎಎಲ್‍ನಿಂದ ಮೈಸೂರಿಗೆ ಪ್ರಯಾಣ ಬೆಳೆಸಿ ಅಲ್ಲಿಂದ ಊಟಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಅವರು ವಿಶ್ರಾಂತಿ ಪಡೆಯಲಿದ್ದಾರೆ ಎಂದು ಮೂಲಗಳಿಂದ ತಿಳಿದುವಂದಿದೆ.

ಹಸಿರಿನ ವಾತಾವರಣದಿಂದ ಕೂಡಿರುವ ಊಟಿಯಲ್ಲಿ ಸದ್ಯ ರಾಜ್ಯದಲ್ಲಿ ಇರುವಷ್ಟು ಬಿಸಿ ವಾತಾವರಣ ಇಲ್ಲ. ಹೀಗಾಗಿ ಆಪ್ತರ ಸಲಹೆಯ ಮೇರೆಗೆ ಅವರು ಊಟಿಯಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಸಹಿತ ಧಾರಕಾರ ಮಳೆ