Select Your Language

Notifications

webdunia
webdunia
webdunia
webdunia

ಎಕ್ಸಿಟ್ ಪೋಲ್ ಅಲ್ಲ, ಕಾಂಗ್ರೆಸ್ ನಮಗೆ ಹೆಚ್ಚು ಸ್ಥಾನ ಎನ್ನುತ್ತಿರುವುದು ಈ ವರದಿ ಆಧಾರದ ಮೇಲೆ

Siddaramaiah-DK Shivakumar

Krishnaveni K

ಬೆಂಗಳೂರು , ಸೋಮವಾರ, 3 ಜೂನ್ 2024 (10:37 IST)
ಬೆಂಗಳೂರು: ಲೋಕಸಭೆ ಚುನಾವಣೆ 2024 ರ ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್ 6-7 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ. ಆದರೆ ರಾಜ್ಯ ನಾಯಕರು ನಮಗೆ ಡಬಲ್ ಡಿಜಿಟ್ ಬಂದೇ ಬರುತ್ತದೆ ಎನ್ನುತ್ತಿದ್ದಾರೆ. ರಾಜ್ಯ ನಾಯಕರು ಈ ರೀತಿ ಆತ್ಮವಿಶ್ವಾಸದಿಂದಲು ಕಾರಣವೇನು ಗೊತ್ತಾ?

ಎಕ್ಸಿಟ್ ಪೋಲ್ ನಲ್ಲಿ ಹೆಚ್ಚಿನ ಸಂಸ್ಥೆಗಳು ಈ ಬಾರಿಯೂ ಮತ್ತೆ ಮೋದಿ ನೇತೃತ್ವದಲ್ಲಿ ಎನ್ ಡಿಎ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. ಎಕ್ಸಿಟ್ ಪೋಲ್ ಫಲಿತಾಂಶಗಳೇ ಎಲ್ಲಾ ಬಾರಿಯೂ ನಿಜವಾಗಬೆಕೆಂದೇನೂ ಇಲ್ಲ.

ಹೀಗಾಗಿ ರಾಷ್ಟ್ರೀಯ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ನಮಗೆ ಎಕ್ಸಿಟ್ ಪೋಲ್ ನಲ್ಲಿ ನಂಬಿಕೆಯಿಲ್ಲ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ ದಾಟಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವೂ ಇದೆ.

ಕಾಂಗ್ರೆಸ್ ನಾಯಕರು ಚುನಾವಣಾ ಫಲಿತಾಂಶಕ್ಕಾಗಿ ಗುಪ್ತಚರ ಇಲಾಖೆಯ ಮಾಹಿತಿಯ ಮೊರೆ ಹೋಗಿದ್ದಾರೆ. ಗುಪ್ತಚರ ಇಲಾಖೆ ವರದಿ ಆಧರಿಸಿ ಈ ಹೇಳಿಕೆ ನೀಡುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕೈ ಹಿಡಿದರೆ ರಾಜ್ಯದಲ್ಲಿ ಕೈ ಪಕ್ಷ 15 ಸ್ಥಾನದವರೆಗೂ ಗೆಲ್ಲಬಹುದು ಎಂಬ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಡಬಲ್ ಡಿಜಿಟ್ ಬರಲಿದೆ, ಕೇಂದ್ರದಲ್ಲಿ ಇಂಡಿಯಾ ಬ್ಲಾಕ್ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ ಎಣಿಕೆ ನಡೆಯಲಿದೆ, ನಾಳೆ ಈ ರೋಡ್ ನಲ್ಲಿ ಸಂಚರಿಸಬೇಡಿ