Publish Date: Tue, 07 Dec 2021 (17:17 IST)
Updated Date: Tue, 07 Dec 2021 (20:46 IST)
ಭೋಪಾಲ್ : ಅಪ್ಪ ಬೈದರೆಂದು 17 ವರ್ಷದ ಹುಡುಗನೊಬ್ಬ 21 ಕಬ್ಬಿಣದ ಮೊಳೆಗಳನ್ನು ನುಂಗಿದ ವಿಚಿತ್ರ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಹುಡುಗನನ್ನು ಧನಂಜಯ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಈತನನ್ನು ತಂದೆ ಯಾವುದೋ ಒಂದು ವಿಚಾರಕ್ಕೆ ಗದದ್ದಾರೆ. ಇಷ್ಟಕ್ಕೆ ಸಿಟ್ಟುಕೊಂಡ ಆತ 21 ಕಬ್ಬಿಣದ ಮೊಳೆಗಳನ್ನು ನುಂಗಿ ಬಿಟ್ಟಿದ್ದಾನೆ. ಇದಾದದ ಬಳಿಕ ಹುಡುಗನಿಗೆ ಪ್ರತಿದಿನ ಹೊಟ್ಟೆನೋವು ಕಾಣಿಸಿಕೊಂಡಿದೆ.
ಈ ನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕಗೊಂಡ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಇತ್ತ ಹುಡುಗನನ್ನು ಪರೀಕ್ಷೆ ನಡೆಸಿದ ವೈದ್ಯರಿಗೆ ಪರಿಸ್ಥಿತಿ ಏನೆಂಬುದು ಅರ್ಥವಾಗಲಿಲ್ಲ. ಹೀಗಾಗಿ ಅವರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಡೆಸಬೇಕು ಎಂದು ಹೇಳಿದರು. ಈ ಸ್ಕ್ಯಾನಿಂಗ್ ವೇಳೆ ಹುಡುಗನ ಹೊಟ್ಟೆಯಲ್ಲಿ ಮೊಳೆಗಳಿರುವುದು ಕಂಡುಬಂದಿದೆ.
ಪೋಷಕರ ಒಪ್ಪಿಗೆ ಸಿಕ್ಕ ಕೂಡಲೇ ಎರಡೂವರೆ ಗಂಟೆಗಳ ಸತತ ಶಸ್ತ್ರಚಿಕಿತ್ಸೆ ನಡೆಸಿ ಮೊಳೆಗಳನ್ನು ಹೊರತೆಗೆಯಲಾಗಿದೆ. ಸದ್ಯ ಯುವಕ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ತಿಳಿಸಿದರು.