Publish Date: Sat, 29 May 2021 (11:51 IST)
Updated Date: Sat, 29 May 2021 (11:57 IST)
ಭೋಪಾಲ್ : ಪತಿ ಮರ ಕಡಿಯಲು ನಿರಾಕರಿಸಿದ್ದಕ್ಕೆ ಆತನ ಗರ್ಭಿಣಿ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಹಿಂಸೆ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಆರೀಪಿ ಒಡೆತನದ ಜಮೀನಿನಲ್ಲಿ ಕೆಲವು ಮರಗಳಿದ್ದು, ಅದನ್ನು ಕತ್ತರಿಸಲು ಕಾರ್ಮಿಕನೊಬ್ಬನಿಗೆ ಹೇಳಿದ್ದಾನೆ, ಆದರೆ ಆತನಿಗೆ ಆರೋಗ್ಯ ಸರಿ ಇರದ ಕಾರಣ ಮರ ಕಡಿಯಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಆರೋಪಿ ಆತನ ಮನೆಗೆ ನುಗ್ಗಿ ಆತನ ಹೆಂಡತಿ ಮಕ್ಕಳನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ್ದಾನೆ.
ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ, ಮತ್ತು ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.