Publish Date: Sat, 03 Aug 2019 (10:01 IST)
Updated Date: Sat, 03 Aug 2019 (10:03 IST)
ಹೈದರಾಬಾದ್: ಹೆಣ್ಣು ಕೊಟ್ಟ ಅತ್ತೆ-ಮಾವ ದೇವರ ಸಮಾನ ಎನ್ನುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಹೆಣ್ಣು ಕೊಟ್ಟ ಅತ್ತೆಯ ಮೇಲೆಯೇ ಅತ್ಯಾಚಾರವೆಸಗಿ ಜೈಲು ಸೇರಿದ್ದಾನೆ.
ಹೈದರಾಬಾದ್ ನಲ್ಲಿ ಇಂತಹ ಘಟನೆ ನಡೆದಿದ್ದ ಆಪಾದಿತನನ್ನು 30 ವರ್ಷದ ಭಾಸ್ಕರ್ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿಯ ತಾಯಿಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ಈ ವಿಚಾರ ಬಾಯ್ಬಿಟ್ಟರೆ ಮಗಳಿಗೆ ವಿಚ್ಛೇದನ ನೀಡುವುದಾಗಿ ಬೆದರಿಸಿದ್ದ.
ಆದರೆ ಇದಕ್ಕೆ ಸೊಪ್ಪು ಹಾಕದ ಅತ್ತೆ ಪೊಲೀಸರಿಗೆ ದೂರು ನೀಡಿದ್ದು, ಆಪಾದಿತನನ್ನು ಬಂಧಿಸಲಾಗಿದೆ.