Publish Date: Wed, 31 Jul 2019 (10:05 IST)
Updated Date: Wed, 31 Jul 2019 (10:07 IST)
ನವದೆಹಲಿ: ಸಾವಿರಾರು ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಭಾರತದಿಂದ ತಲೆಮರೆಸಿಕೊಂಡು ಲಂಡನ್ ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಕೆಫೆ ಕಾಫಿ ಡೇ ಮಾಲಿಕ ಸಿದ್ಧಾರ್ಥ್ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಸಿದ್ಧಾರ್ಥ್ ಸಾವನ್ನೇ ನೆಪವಾಗಿಸಿ ಐಟಿ ಇಲಾಖೆ ಮತ್ತು ಬ್ಯಾಂಕ್ ಗಳ ವಿರುದ್ಧ ವಿಜಯ್ ಮಲ್ಯ ಟೀಕಾಪ್ರಹಾರ ನಡೆಸಿದ್ದಾರೆ. ಸಿದ್ಧಾರ್ಥ್ ಸಾವಿಗೆ ಸರ್ಕಾರಿ ಏಜೆನ್ಸಿಗಳು ಮತ್ತು ಬ್ಯಾಂಕ್ ಗಳ ಕಾಟವೇ ಕಾರಣ ಎಂದು ದೂರಿದ್ದಾರೆ.
ಸಾಲದ ವಿಚಾರದಲ್ಲಿ ಸಿದ್ದಾರ್ಥ್ ಒತ್ತಡಕ್ಕೊಳಗಾಗಿದ್ದರು. ಇದುವೇ ಅವರ ಸಾವಿಗೆ ಕಾರಣವಾಯಿತು ಎಂಬ ಸುದ್ದಿ ಓಡಾಡುತ್ತಿದೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಮಲ್ಯ ‘ಸರ್ಕಾರಿ ಏಜೆನ್ಸಿಗಳು ಮತ್ತು ಬ್ಯಾಂಕ್ ಗಳು ಯಾರನ್ನೂ ಬೇಕಾದರೂ ಇಂತಹ ಸ್ಥಿತಿಗೆ ದೂಡಬಹುದು. ಎಲ್ಲಾ ಸಾಕ ಪಾವತಿ ಮಾಡುತ್ತೇನೆ ಎಂದರೂ ನನಗೆ ಅವರು ಏನು ಮಾಡ್ತಿದ್ದಾರೆ ನೀವೇ ನೋಡಿ’ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.