Publish Date: Thu, 25 Jun 2026 (09:43 IST)
Updated Date: Thu, 25 Jun 2026 (09:51 IST)
ಪುಣೆ: ದೇಶವನ್ನೇ ಬೆಚ್ಚಿಬೀಳಿಸಿರುವ ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಮಹತ್ವದ ವಿಚಾರಗಳು ಹೊರಬೀಳುತ್ತಿವೆ. ಕೇತನ್ ಭಾವೀ ಪತ್ನಿ ಸಿಯಾ ಕೊಲೆ ಮಾಡಿರುವ ಕಾರಣವೇನೆಂದು ತಿಳಿಸಿದ್ದಾಳೆ.
ಪುಣೆಯ ಯುವ ಉದ್ಯಮಿ 26 ವರ್ಷದ ಕೇತನ್ ಅಗರ್ವಾಲ್ ರನ್ನು ಭಾವೀ ಪತ್ನಿ ಸಿಯಾ (20 ವರ್ಷ) ಲೋಹಗಢ್ ಬೆಟ್ಟಕ್ಕೆ ಟ್ರಕ್ಕಿಂಗ್ ನೆಪದಲ್ಲಿ ಕರೆದೊಯ್ದು ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿ 400 ಅಡಿ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿದ್ದಳು. ಇದೀಗ ಸಿಯಾ ಮತ್ತು ಚೇತನ್ ಇಬ್ಬರನ್ನೂ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ತನಿಖೆಯಲ್ಲಿ ಸಿಯಾ ಕೊಲೆ ಮಾಡಿರುವ ಕಾರಣ ಹೇಳಿದ್ದಾಳೆ. ಇಷ್ಟು ಬೇಗ ಮದುವೆಯಾಗಲು ಮಾನಸಿಕವಾಗಿ ಸಿದ್ಧವಾಗಿರಲಿಲ್ಲ. ಆದರೆ ಮನೆಯವರು ಕೇತನ್ ನನ್ನು ಮದುವೆಯಾಗಲು ಭಾರೀ ಒತ್ತಡ ಹಾಕಿದ್ದರು ಎಂಬ ಕಾರಣಕ್ಕೆ ಮದುವೆಗೆ ಸಿದ್ಧತೆ ನಡೆದಿತ್ತು.
ಈ ನಡುವೆ ಪೊಲೀಸರು ತನಿಖೆ ವೇಳೆ ಕಂಡುಕೊಂಡಂತೆ, ಚೇತನ್ ನನ್ನು ಸಿಯಾ ಕಳೆದ ವರ್ಷದ ದೀಪಾವಳಿ ಪಾರ್ಟಿಯಲ್ಲಿ ಡ್ರೈಫ್ರೂಟ್ ವ್ಯಾಪಾರಿಯಾಗಿದ್ದ ಚೇತನ್ ನನ್ನು ಭೇಟಿಯಾಗಿದ್ದಳು. ನಂತರ ಇವರ ಮಧ್ಯೆ ಸ್ನೇಹ, ಸಲುಗೆ ಬೆಳೆದಿತ್ತು. ಇಬ್ಬರ ಸಂಬಂಧದ ನಡುವೆ ಕೇತನ್ ಅಡ್ಡಿಯಾಗಿದ್ದ. ಹೀಗಾಗಿ ಆತನನ್ನು ಜಗತ್ತಿನಿಂದಲೇ ಇಲ್ಲವಾಗಿಸಲು ಚೇತನ್ ಜೊತೆ ಸಿಯಾ ಪ್ಲ್ಯಾನ್ ಮಾಡಿದ್ದಳು.
ಮೇ 31 ರಂದು ಕೇತನ್ ನನ್ನು ಕೋಟೆಗೆ ಕರೆದುಕೊಂಡಿದ್ದಾಗ ಆತ ಅಪಾಯಕಾರಿ ಜಾಗದಲ್ಲಿ ಕೂತಿದ್ದು ನೋಡಿದಾಗ ಸಿಯಾಗೆ ಕಂದಕಕ್ಕೆ ತಳ್ಳುವ ಐಡಿಯಾ ಹೊಳೆದಿತ್ತು. ಜೂನ್ 6 ರಂದು ಪ್ರಿ ವೆಡ್ಡಿಂಗ್ ಶೂಟಿಂಗ್ ಗೆ ಇಂಡೋನೇಷ್ಯಾಗೆ ತೆರಳುವಾಗ ಉಪಾಯವಾಗಿ ಆತನ ಪಾಸ್ ಪೋರ್ಟ್ ಕದ್ದು ನಾಶ ಮಾಡಿ ಕೊನೆಗೆ ಕಾಣೆಯಾಗಿದೆ ಎಂದು ನಾಟಕವಾಡಿದ್ದಳು. ಬಳಿಕ ಕೇತನ್ ಜೊತೆ ಜಗಳವಾಡಿ ಆತನನ್ನು ಮತ್ತೊಮ್ಮೆ ಕೋಟೆಗೆ ಕರೆದೊಯ್ದಿದ್ದಳು. ಅಲ್ಲಿ ಆತನನ್ನು ಮೊದಲ ಬಾರಿಗೆ ತಳ್ಳಿ ಕೊಲೆ ಮಾಡುವ ಯತ್ನ ಮಾಡಿದ್ದಳು. ಆದರೆ ಆಗ ಕೇತನ್ ಪೊದೆ ಹಿಡಿದು ಕಾಪಾಡಿಕೊಂಡಿದ್ದ. ಆತ ರಕ್ಷಿಸಿಕೊಂಡಾಗ ಹಾವು ಇತ್ತು ಎಂದು ನಾಟಕವಾಡಿ ಆತನನ್ನು ತಬ್ಬಿಕೊಂಡಿದ್ದಳು.
ಇದೀಗ ಜೂನ್ 18 ರಂದು ಮತ್ತೆ ಬರ್ತ್ ಡೇ ನೆಪವೊಡ್ಡಿ ಅದೇ ಲೋಹಗಢ್ ಕೋಟೆಗೆ ಕರೆತಂದು ಪ್ರಿಯಕರನ ಜೊತೆ ಸೇರಿಕೊಂಡು ಕಂದಕಕ್ಕೆ ತಳ್ಳಿ ಕೇತನ್ ನನ್ನು ಕೊಲೆ ಮಾಡಿದ್ದಳು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ