Select Your Language

Notifications

webdunia
webdunia
webdunia
webdunia

ಕೇತನ್ ಅಗರ್ವಾಲ್ ಹತ್ಯೆ ಮಾಡುವ ಕೆಲವೇ ಗಂಟೆ ಮುಂಚೆ ಸಿಯಾ ಮಾಡಿದ ಕೆಲಸವೇನು ಗೊತ್ತಾ: ಶಾಕಿಂಗ್

Ketan Agarwal-Siya Goyal-Chethan Chaudhary
Photo Credit: Instagram
ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ರನ್ನು ಕೊಲೆ ಮಾಡುವ ಮುನ್ನ ಭಾವೀ ಪತ್ನಿ ಸಿಯಾ ಗೋಯಲ್ ಏನು ಮಾಡಿದ್ದಳು ಎಂಬ ಅಂಶ ಇದೀಗ ತನಿಖೆಯಿಂದ ಬಯಲಾಗಿದೆ.

ಪುಣೆಯ ಯುವ ಉದ್ಯಮಿ 26 ವರ್ಷದ ಕೇತನ್ ಅಗರ್ವಾಲ್ ರನ್ನು ಭಾವೀ ಪತ್ನಿ ಸಿಯಾ (20 ವರ್ಷ) ಲೋಹಗಢ್ ಬೆಟ್ಟಕ್ಕೆ ಟ್ರಕ್ಕಿಂಗ್ ನೆಪದಲ್ಲಿ ಕರೆದೊಯ್ದು ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿ 400 ಅಡಿ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿದ್ದಳು. ಇದೀಗ ಸಿಯಾ ಮತ್ತು ಚೇತನ್ ಇಬ್ಬರನ್ನೂ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆ ವೇಳೆ ಸಿಯಾ ಕೊಲೆಗೆ ಕೆಲವೇ ಗಂಟೆ ಮುನ್ನ ಮಾಡಿದ ಕೆಲಸ ಬಹಿರಂಗವಾಗಿದೆ. ಕೇತನ್ ಜೊತೆ ಸಿಯಾ ನಿಶ್ಚಿತಾರ್ಥ ಫೆಬ್ರವರಿಯಲ್ಲಿ ನಡೆದಿತ್ತು. ಆ ಬಳಿಕ ಸಿಯಾ ಆತನ ಕೊಲೆಗೆ ಪ್ರಿಯಕರನ ಜೊತೆ ಸೇರಿ ಸ್ಕೆಚ್ ಹಾಕಿದ್ದಳು. ಇದಕ್ಕೆ ಮೊದಲು ಒಮ್ಮೆ ಇದೇ ಬೆಟ್ಟಕ್ಕೆ ಆತನನ್ನು ಕರೆದುಕೊಂಡು ಹೋಗಿ ನೂಕುವ ಪ್ರಯತ್ನ ಮಾಡಿದ್ದಳು. ಆದರೆ ಆಗ ಅದೃಷ್ಟವಶಾತ್ ಪೊದೆ ಹಿಡಿದು ಬದುಕುಳಿದಿದ್ದ. ಸಿಯಾ ಹಾವು ಬಂತೆಂದು ಹಾಗೆ ಮಾಡಿದ್ದಾಗ ನಾಟಕ ಮಾಡಿದ್ಧಳು. ಅದನ್ನು ಆತ ನಂಬಿದ್ದ.

ಈ ಬಾರಿ ಕೇತನ್ ಕೊಲೆ ಮಾಡುವ ಮೊದಲು ಸಿಯಾ ಪ್ರಿಯಕರ ಚೇತನ್ ನನ್ನು ಜೂನ್ 18 ರಂದು ಬೆಳಿಗ್ಗೆ ಕೆಫೆಯೊಂದರಲ್ಲಿ ಭೇಟಿ ಮಾಡಿದ್ದಳು. ಅಲ್ಲಿ ಇಬ್ಬರೂ ಕೊಲೆಗೆ ಪ್ಲ್ಯಾನ್ ಮಾಡಿದ್ದರು. ಬೆಟ್ಟದ ಯಾವ ತುದಿಗೆ ಕರೆದುಕೊಂಡು ಹೋಗಿ ಎಲ್ಲಿ ಕೇತನ್ ನನ್ನು ತಳ್ಳಬೇಕು ಎಂದು ಯೋಜನೆ ಹಾಕಿದ್ದರು.

ಮಧ್ಯಾಹ್ನದ ನಂತರ ಕೇತನ್ ನನ್ನು ಕರೆದುಕೊಂಡು ಸಿಯಾ ಬೆಟ್ಟ ಹತ್ತಿದ್ದಳು. ಈ ವೇಳೆ ಚೇತನ್ ಕೂಡಾ ಅವರನ್ನು ಫಾಲೋ ಮಾಡಿದ್ದ. ತನ್ನ ಹಿಂದೇ ಬರುತ್ತಿದ್ದ ಚೇತನ್ ಗೆ ಸಿಯಾ ಕೈ ಸನ್ನೆ ಮಾಡುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಬಳಿಕ ಇಬ್ಬರೂ ಸೇರಿ ಕೇತನ್ ನನ್ನು ತಳ್ಳಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೆರಿಯಾರ್ ಹೇಳಿದ್ದನ್ನೆಲ್ಲಾ ನಾವು ಒಪ್ಪಲ್ಲ, ನಮಗೆ ದೇವರ ಮೇಲೆ ನಂಬಿಕೆಯಿದೆ ಎಂದ ಸಿಎಂ ವಿಜಯ್