Publish Date: Wed, 24 Jun 2026 (19:05 IST)
Updated Date: Wed, 24 Jun 2026 (19:08 IST)
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (ನಟ ವಿಜಯ್) ಅವರು ವಿಧಾನಸಭೆಯಲ್ಲಿ ದ್ರಾವಿಡ ಚಳವಳಿಯ ಪಿತಾಮಹ ಪೆರಿಯಾರ್ ಇವಿಆರ್ ಅವರ ಸಿದ್ಧಾಂತ ಹಾಗೂ ದೇವರ ನಂಬಿಕೆಯ ಕುರಿತು ಆಡಿರುವ ಮಾತುಗಳು ಸದ್ಯ ತಮಿಳುನಾಡು ಮತ್ತು ದಕ್ಷಿಣ ಭಾರತದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.
ತಮ್ಮ ಸಿದ್ಧಾಂತವನ್ನು ಸ್ಪಷ್ಟಪಡಿಸುವ ಸಂದರ್ಭದಲ್ಲಿ ಮಾತನಾಡಿದ ಸಿಎಂ ವಿಜಯ್, "ನಾವು ಪೆರಿಯಾರ್ ಅವರ ಎಲ್ಲ ಸಿದ್ಧಾಂತಗಳನ್ನೂ ಒಪ್ಪುವುದಿಲ್ಲ. ನಮಗೆ ದೇವರ ಮೇಲೆ ಅಪಾರ ನಂಬಿಕೆಯಿದೆ" ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.
ತಮಿಳುನಾಡಿನ ರಾಜಕೀಯವು ಕಳೆದ ಅರ್ಧ ಶತಮಾನದಿಂದ 'ದ್ರಾವಿಡ ಸಿದ್ಧಾಂತ' ಹಾಗೂ 'ನಾಸ್ತಿಕತೆ'ಯ ಅಡಿಪಾಯದ ಮೇಲೆಯೇ ನಡೆಯುತ್ತಾ ಬಂದಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಪೆರಿಯಾರ್ ಅವರ ತತ್ವಗಳನ್ನು ಪಾಲಿಸುವುದಾಗಿ ಹೇಳಿಕೊಳ್ಳುತ್ತವೆ. ಆದರೆ, ಹೊಸದಾಗಿ ಅಧಿಕಾರಕ್ಕೆ ಬಂದಿರುವ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷವು ಸಾಂಪ್ರದಾಯಿಕ ದ್ರಾವಿಡ ರಾಜಕೀಯಕ್ಕಿಂತ ಭಿನ್ನವಾದ ಹಾದಿ ತುಳಿಯುತ್ತಿರುವುದಕ್ಕೆ ಈ ಹೇಳಿಕೆ ಸಾಕ್ಷಿಯಾಗಿದೆ.
ಪೆರಿಯಾರ್ ಅವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಮತ್ತು ಜಾತಿ ಪದ್ಧತಿಯ ನಿರ್ಮೂಲನೆಯನ್ನು ನಾವು ಸಂಪೂರ್ಣವಾಗಿ ಗೌರವಿಸುತ್ತೇವೆ ಮತ್ತು ಅಳವಡಿಸಿಕೊಳ್ಳುತ್ತೇವೆ" ಎಂದು ವಿಜಯ್ ಸ್ಪಷ್ಟಪಡಿಸಿದರು.
ಆದರೆ, ಪೆರಿಯಾರ್ ಅವರ ನಾಸ್ತಿಕ ವಾದವನ್ನು ನಾವು ಒಪ್ಪುವುದಿಲ್ಲ. ನಮ್ಮ ಪಕ್ಷವು ಆಧ್ಯಾತ್ಮಿಕತೆ ಮತ್ತು ಜನರ ದೈವ ನಂಬಿಕೆಯನ್ನು ಗೌರವಿಸುತ್ತದೆ. ದೇವರ ಅಸ್ತಿತ್ವದ ಮೇಲೆ ನಮಗೆ ದೃಢವಾದ ವಿಶ್ವಾಸವಿದೆ" ಎಂದು ಸದನದಲ್ಲಿ ಹೇಳಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ