Publish Date: Thu, 11 Feb 2021 (10:54 IST)
Updated Date: Thu, 11 Feb 2021 (10:57 IST)
ಹುಬ್ಬಳ್ಳಿ : ಹಿಂದ ಸಮಾವೇಶ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಹಿಂದುಳಿದವರ ಪರವಾಗಿ ಇದೆ. ಹೀಗಾಗಿ ನಾವು ಹೋರಾಟ ಮಾಡುವ ಅವಶ್ಯಕತೆ ಇಲ್ಲ. ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಎಸ್.ಟಿ.ಮೀಸಲಾತಿಗೆ ಕುರುಬ ಸಮುದಾಯದ ಹೋರಾಟ ವಿಚಾರವನ್ನು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್ ನವರು ಈಶ್ವರಪ್ಪರನ್ನ ಎತ್ತಿಕಟ್ಟಿ ಹೋರಾಟ ಮಾಡಿಸ್ತಿದ್ದಾರೆ. ಕುರುಬರನ್ನು ಎಸ್ ಟಿಗೆ ಸೇರಿಸಬೇಕೆಂದು ನಾನೇ ಹೇಳಿದ್ದೆ. ನಾನು ಸಿಎಂ ಆಗಿದ್ದಾಗಲೇ ಎಸ್ ಟಿಗೆ ಸೇರಬೇಕೆಂದು ಹೇಳಿದ್ದೆ. ಎಸ್ ಟಿ ಮೀಸಲು ಹೋರಾಟದಲ್ಲಿ ರಾಜಕೀಯ ಮಾಡಲ್ಲ, ಕುಲಶಾಸ್ತ್ರ ಅಧ್ಯಯನದ ಬಗ್ಗೆ ಇನ್ನೂ ವರದಿಯೇ ಬಂದಿಲ್ಲ. ವರದಿ ಬರುವುದಕ್ಕೂ ಮುನ್ನವೇ ಹೋರಾಟ ಬೇಡ ಅಂದಿದ್ದೆ. ಆದ್ರೆ ಈಗ ಮಾಡ್ತಿರುವ ಹೋರಾಟ ಆರ್ ಎಸ್ ಎಸ್ ಪ್ರೇರಿತ ಎಂದು ತಿಳಿಸಿದ್ದಾರೆ.