Publish Date: Thu, 31 Aug 2017 (09:44 IST)
Updated Date: Thu, 31 Aug 2017 (09:46 IST)
ನವದೆಹಲಿ: ನಮ್ಮ ದೇಶದ ಸಂಸದರಲ್ಲಿ ಹೆಚ್ಚಿನವರು ಅಪರಾಧ ಹಿನ್ನಲೆಯುಳ್ಳವರು ಎಂಬುದು ಇದೀಗ ಗುಟ್ಟಾಗಿ ಉಳಿದಿಲ್ಲ. ಆದರೆ 51 ಸಂಸದರು ಮಹಿಳೆಯರ ವಿರುದ್ಧ ಒಂದಲ್ಲಾ ಒಂದು ರೀತಿ ದೌರ್ಜನ್ಯ ನಡೆಸಿದ ಕ್ರಿಮಿನಲ್ ಗಳೇ ಅಂತೆ!
ಹಾಗಂತ ಎಡಿಆರ್ ಎಂಬ ಸ್ವಯಂ ಸಂಘ ನಡೆಸಿದ ಸಮೀಕ್ಷೆ ಸತ್ಯ ಹೊರಹಾಕಿದೆ. ಪ್ರಸಕ್ತ ನಮ್ಮ ದೇಶದಲ್ಲಿ 774 ಸಂಸದರು ಮತ್ತು 4,078 ಶಾಸಕರಿದ್ದಾರೆ. ಇವರ ಪೈಕಿ 1581 ಮಂದಿ ಅಪರಾಧ ಚಟುವಟಿಕೆಯಲ್ಲಿ ಸಿಕ್ಕಿ ಹಾಕಿಕೊಂಡವರು.
ಇವರ ಪೈಕಿ 51 ಸಂಸದರು ಮತ್ತು ಶಾಸಕರು ಮಹಿಳೆಯರ ವಿರುದ್ಧ ದೌರ್ಜನ್ಯವೆಸಗಿದವರು. ಅವರಲ್ಲಿ ನಾಲ್ವರ ಮೇಲೆ ಅತ್ಯಾಚಾರ ಆರೋಪವಿದೆ ಎಂದು ತಿಳಿದು ಬಂದಿದೆ. 334 ಮಂದಿ ಸಂಸದರು ಮತ್ತು ಶಾಸಕರಿಗೆ ತಮ್ಮ ತಮ್ಮ ರಾಜಕೀಯ ಪಕ್ಷಗಳು ಅಪರಾಧ ಹಿನ್ನಲೆಯಿದ್ದರೂ ಚುನಾವಣೆಗೆ ಟಿಕೆಟ್ ನೀಡಿದೆ ಎಂದೂ ತಿಳಿದುಬಂದಿದೆ.
ಬಿಜೆಪಿ ಪಕ್ಷದಲ್ಲಿ ಅತೀ ಹೆಚ್ಚು ಮಂದಿ ಮಹಿಳೆಯರ ವಿರುದ್ಧ ದೌರ್ಜನ್ಯವೆಸಗಿದ ಆರೋಪ ಹೊಂದಿರುವ ಶಾಸಕರು ಮತ್ತು ಸಂಸದರಿದ್ದಾರೆ. ಬಿಜೆಪಿಯಲ್ಲಿ ಒಟ್ಟು 14 ಮಂದಿ ಇಂತಹ ರಾಜಕಾರಣಿಗಳಿದ್ದಾರೆ. ಇನ್ನು ದ್ವಿತೀಯ ಸ್ಥಾನ ಶಿವಸೇನೆ (7), ತೃತೀಯ ಸ್ಥಾನ (6) ಕಾಂಗ್ರೆಸ್ ಗಿದೆ.