Publish Date: Fri, 04 Aug 2017 (05:41 IST)
Updated Date: Fri, 04 Aug 2017 (05:47 IST)
ನವದೆಹಲಿ: ಸಚಿನ್ ತೆಂಡುಲ್ಕರ್ ಸಂಸದ ಎನ್ನುವ ವಿಚಾರ ಬಹುತೇಕರಿಗೆ ಮರೆತು ಹೋಗಿದೆ. ಅದನ್ನು ನೆನಪಿಸುವುದಕ್ಕೇನೋ ಎಂಬಂತೆ ತೆಂಡುಲ್ಕರ್ ನಿನ್ನೆ ರಾಜ್ಯಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ.
ತೆಂಡುಲ್ಕರ್ ಸಂಸತ್ತಿನಲ್ಲಿ ಕಾಣಿಸಿಕೊಂಡಿದ್ದೇ ತಡ ಟ್ವಿಟರ್ ನಲ್ಲಿ ಪ್ರತಿಕ್ರಿಯೆಯ ಮಹಾಪೂರವೇ ಹರಿದು ಬಂದಿದೆ. ಕೆಲವರು ಕಾಲೆಳೆದರೆ ಇನ್ನು ಕೆಲವರು ವಿಡಂಬನಾತ್ಮಕವಾಗಿ ಬರೆದಿದ್ದಾರೆ.
ಒಬ್ಬರಂತೂ ತೆಂಡುಲ್ಕರ್ ರನ್ನು ಈದ್ ಮಿಲಾದ್ ಗೆ ಬರುವ ಚಂದ್ರನಿಗೆ ಹೋಲಿಸಿದ್ದಾರೆ. ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ಸದಸ್ಯರೊಬ್ಬರು ಇಂತಹ ಸಂಸದರ ಗೈರು ಹಾಜರಿಯನ್ನು ಪ್ರಶ್ನಿಸಿದ್ದರು. ಅದರ ಬೆನ್ನಲ್ಲೇ ತೆಂಡುಲ್ಕರ್ ಸಂಸತ್ತಿಗೆ ‘ಹಾಜರಿ’ ಹಾಕಿದ್ದಾರೆ.