Publish Date: Thu, 03 Aug 2017 (20:34 IST)
Updated Date: Thu, 03 Aug 2017 (20:38 IST)
ನಿನ್ನೆ ಸಿಆರ್‌ಪಿಎಫ್ ಜೊತೆಯಲ್ಲಿ ಬಂದವರು ನಮ್ಮನ್ನು ಹೆದರಿಸಿದ್ದಾರೆ. ಗುಜರಾತ್ ರಾಜ್ಯದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ಗುಜರಾತ್‌ನ ಕಾಂಗ್ರೆಸ್ ಶಾಸಕ ಪರೇಶ್ ರಾವಲ್ ಕಣ್ಣೀರು ಹಾಕಿದ್ದಾರೆ.
ಮಾಧ್ಯಮಗಳ ಎದುರು ಕಣ್ಣೀರು ಹಾಕಿ ಪ್ರತಿಕ್ರಿಯಿಸಿದ ಶಾಸಕ ರಾವಲ್, ಬಿಜೆಪಿಯ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ. ನಾವೆಲ್ಲಾ ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದ್ದಾರೆ.
ರೆಸಾರ್ಟ್‌ನ ಲಾಬಿಯಲ್ಲಿ ಗನ್ ಹಿಡಿದು ಉಗ್ರರಂತೆ ನಿಂತಿದ್ದ ಸಿಆರ್‌ಪಿಎಫ್ ಯೋಧರು ಬೆದರಿಕೆಯೊಡ್ಡಿದ್ದಾರೆ. ಗುಜರಾತ್‌ಗೆ ಮರಳಲು ಹೆದರಿಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಒಂದು ಮತದಿಂದ ಗೆಲ್ಲುತ್ತಾರೆ. ನಾವು ಶಾಸಕರು ಒಂದಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಗುಜರಾತ್ ಶಾಸಕ ಪರೇಶ್ ರಾವಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.