ರಾಜಸ್ಥಾನದ ದೋಲ್‌ಪುರದ ಶಿವಾಲಯವು ನಿಗೂಢ ಮಂದಿರವೆಂದು ನಂಬಲಾಗಿದೆ. ಅಚಲೇಶ್ವರ ಮಹಾದೇವ ಮಂದಿರದ ಶಿವಲಿಂಗವು ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದೆ. ವಿಜ್ಞಾನಿಗಳು ಮಾತ್ರ ಈ ಬಣ್ಣ ಬದಲಾವಣೆಯು ಸೂರ್ಯನ ಬೆಳಕಿನ ಕಾರಣದಿಂದ ಎಂದು ನಂಬಿದ್ದಾರೆ. ಆದರೆ ಇದನ್ನು ದೃಢೀಕರಿಸುವ ಸಂಶೋಧನೆ ನಡೆದಿಲ್ಲ. ಬೆಳಿಗ್ಗೆ ಶಿವಲಿಂಗವು ಕೆಂಪು ಬಣ್ಣದಲ್ಲಿದ್ದರೆ, ಮಧ್ಯಾಹ್ನದ ವೇಳೆಗೆ ಕೇಸರಿ ಬಣ್ಣಕ್ಕೆ ಪರಿವರ್ತನೆಯಾಗುತ್ತದೆ.
ರಾತ್ರಿ ವೇಳೆಯಲ್ಲಿ ಶಿವಲಿಂಗದ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ಪವಾಡವನ್ನು ವೀಕ್ಷಿಸಲು ಇಡೀ ದಿನ ಭಕ್ತರ ದಂಡು ತುಂಬಿರುತ್ತದೆ. ಭಕ್ತರು ಇದರಿಂದ ತಮ್ಮ ಇಷ್ಟಾರ್ಥಗಳು ಸಿದ್ದಿಸುತ್ತವೆಂದು ಭಾವಿಸುತ್ತಾರೆ.
ನೆಲದಲ್ಲಿ ಸಾವಿರಾರು ಅಡಿ ಅಗೆದರೂ ಕೂಡ ಶಿವಲಿಂಗದ ಅಂತ್ಯ ಎಲ್ಲಾಗುತ್ತದೆಂದು ತಿಳಿದುಬಂದಿಲ್ಲ. ಆದ್ದರಿಂದ ಈ ಶಿವಲಿಂಗದ ನಿಖರ ಉದ್ದವು ಯಾರಿಗೂ ಗೊತ್ತಾಗಿಲ್ಲ. ಒಮ್ಮೆ ಕೆಲವು ಭಕ್ತರು ಶಿವಲಿಂಗದ ಆಳವನ್ನು ತಿಳಿಯಲು ಸುತ್ತಲಿನ ಪ್ರದೇಶವನ್ನು ಅಗೆದರೂ ಇನ್ನೊಂದು ಕೊನೆಯನ್ನು ಮುಟ್ಟುವಲ್ಲಿ ಅಸಮರ್ಥರಾದರು. ಅವಿವಾಹಿತ ಯುವಕರು ಮತ್ತು ಯುವತಿಯರು ತಮಗೆ ಸರಿಯಾದ ಜೋಡಿ ಸಿಗದಿದ್ದಾಗ ದೇವರ ಆಶೀರ್ವಾದ ಕೋರಿ ಮಂದಿರಕ್ಕೆ ಲಗ್ಗೆ ಇಡುತ್ತಾರೆ.