Select Your Language

Notifications

webdunia
webdunia
webdunia
webdunia

ವಿಶ್ವವನ್ನು ವಿನಾಶ ಮಾಡಲಿದೆ ಈ ಪುಟ್ಟ ಶಿವಲಿಂಗ !

ವಿಶ್ವವನ್ನು ವಿನಾಶ ಮಾಡಲಿದೆ ಈ ಪುಟ್ಟ ಶಿವಲಿಂಗ !
ಉತ್ತರಾಖಂಡ್ , ಶನಿವಾರ, 1 ಆಗಸ್ಟ್ 2015 (11:50 IST)
ಈ ಜಗತ್ತು ನಾಶವಾಗಲಿದೆ ಎಂಬ ಸುದ್ದಿ ಆಗಾಗ ಕೇಳಿ ಬರುತ್ತಿರುತ್ತದೆ. ಕೆಲವರಿಗೆ ಇದು ಆತಂಕ ತಂದರೆ ಮತ್ತೆ ಕೆಲವರು ಈ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. 

ಆದರೆ  ಯಾರು ಈ ಜಗತ್ತನ್ನು ಸೃಷ್ಟಿಸಿದರೋ ಅವರೇ ಈ ಜಗತ್ತನ್ನು  ನಾಶ ಪಡಿಸುತ್ತಾರೆ ಎಂಬುದು ಹಿಂದೂ ಧರ್ಮೀಯರ ನಂಬಿಕೆ. 
 
ಹಿಮದಿಂದ ಆವೃತ್ತವಾದ ಹಿಮಾಲಯಕ್ಕೆ ಭಾರತೀಯ ಪುರಾಣದಲ್ಲಿ ಬಹಳ ಮಹತ್ವವಿದೆ. ಬ್ರಹ್ಮಾಂಡದ ಅನೇಕ ರಹಸ್ಯಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿರುವ ಹಲವು ಗುಹೆಗಳನ್ನು ಇದು ಹೊಂದಿದೆ ಎಂದು ಹೇಳಲಾಗುತ್ತದೆ. 
 
ಜಗತ್ತಿನ ಅಂತ್ಯದ ಕುರಿತು ಹಿಂದೂ ಧರ್ಮಗ್ರಂಥಗಳಲ್ಲಿ ಹಲವು  ಅಭಿಪ್ರಾಯಗಳಿವೆ. ಹಲವು ಹಿಂದೂ ಪುರಾಣಗಳ ಪ್ರಕಾರ ಹಿಮಾಲಯದ ಗುಹೆಯೊಂದರಲ್ಲಿರುವ  6 ಇಂಚಿನ ಪುಟ್ಟ ಶಿವಲಿಂಗವೇ ವಿಶ್ವವನ್ನು ನಾಶಗೊಳಿಸಲಿದೆಯಂತೆ. ದಿನೇದಿನೇ ಬೆಳೆಯುತ್ತಿರುವ ಈ ಶಿವಲಿಂಗ ಚಾವಣಿಯನ್ನು ಮುಟ್ಟುವಂತಹ ಎತ್ತರಕ್ಕೆ ಬೆಳೆದಾಗ ವಿಶ್ವದ ಕೊನೆಯಾಗುತ್ತದೆಯಂತೆ. ಸ್ಕಂದ ಪುರಾಣದಲ್ಲಿ ಈ ರೀತಿಯಲ್ಲಿ ಹೇಳಲಾಗಿದೆ. 
 
ಉತ್ತರಾಖಂಡದ ಗಂಗೋಲಿಹತ್‌ನಲ್ಲಿದೆ ಈ ನಿಗೂಢ ಗುಹೆ. ಇದನ್ನು ಪೈತಾಳ ಭುವನೇಶ್ವರ ಎಂದು ಕರೆಯಲಾಗುತ್ತದೆ. ನಂಬಿಕೆಗಳ ಪ್ರಕಾರ ಈ ಶಿವಲಿಂಗ ಕಲಿಯುಗದ ಸಂಕೇತವಂತೆ. ಇದು ಚಾವಣಿಯನ್ನು ಸ್ಪರ್ಶಿಸಿದಾಗ ಭೂಮಿ ನಾಶವಾಗಿ ಕಲಿಯುಗ ಸಮಾಪ್ತವಾಗಿ ಸತ್ಯಯುಗ ಆರಂಭವಾಗುತ್ತದೆಯಂತೆ. 
 
ಆ ಶಿವಲಿಂಗದ ಸುತ್ತಲೂ ಅನೇಕ ಶಿವಲಿಂಗಗಳಿದ್ದು ಇವು ಹೊಸ ಜಗತ್ತನ್ನು ಸೃಷ್ಟಿ ಮಾಡಲಿವೆ ಎಂದು ಹೇಳಲಾಗುತ್ತದೆ. 
 
ಈ ಸ್ಥಳದಲ್ಲಿ ಮಹಾಕಾಳಿ, ಚಾಮುಂಡಿ ಸೇರಿದಂತೆ ಅನೇಕ ದೇವಾಲಯಗಳಿವೆ. ಆದರೆ ಶಿವಲಿಂಗವಿರುವ ಗುಹೆ ಅತ್ಯಂತ ಪ್ರಸಿದ್ಧವಾಗಿದೆ. 

Share this Story:

Follow Webdunia kannada