Publish Date: Sat, 28 Dec 2019 (08:04 IST)
Updated Date: Sat, 28 Dec 2019 (08:07 IST)
ಮುಂಬೈ: ಮಹಾರಾಷ್ಟ್ರದಲ್ಲಿ ಈಗ ಆಡಳಿತಾರೂಢ ಶಿವಸೇನೆ ಮತ್ತು ವಿಪಕ್ಷ ಬಿಜೆಪಿ ನಡುವೆ ಪವರ್ ವಾರ್ ಜೋರಾಗಿಯೇ ನಡೆದಿದೆ. ಅಧಿಕಾರಕ್ಕೆ ಬಂದಿರುವ ಶಿವಸೇನೆ ಈಗ ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಪತ್ನಿಯ ಬ್ಯಾಂಕ್ ಮೇಲೂ ತೀರಿಸಿಕೊಂಡಿದೆ!
ಮಾಜಿ ಸಿಎಂ ಪತ್ನಿ ಅಮೃತಾ ಫಡ್ನವಿಸ್ ಏಕ್ಸಿಸ್ ಬ್ಯಾಂಕ್ ನಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಮಹಾರಾಷ್ಟ್ರದ ಥಾಣೆಯ ನಗರ ಪಾಲಿಕೆಯ ಆಡಳಿತಾರೂಢ ಪಕ್ಷ ಶಿವಸೇನೆ ಬ್ಯಾಂಕ್ ಗೇ ಗುನ್ನ ಕೊಟ್ಟಿದೆ.
ಈ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ನಗರ ಪಾಲಿಕೆ ಅಧಿಕಾರಿಗಳ ವೇತನ ಖಾತೆಯನ್ನು ಏಕ್ಸಿಸ್ ಬ್ಯಾಂಕ್ ನಿಂದ ಬೇರೊಂದು ರಾಷ್ಟ್ರೀಕೃತ ಬ್ಯಾಂಕ್ ಗೆ ವರ್ಗಾಯಿಸಲು ತೀರ್ಮಾನಿಸಿದೆ. ಶಿವಸೇನೆಯ ಪ್ರಿಯಾಂಕ ಚತುರ್ವೇದಿ ಮತ್ತು ಅಮೃತಾ ನಡುವೆ ಮಾತಿನ ಚಕಮಕಿ ಆದ ಬಳಿಕ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಬ್ಯಾಂಕ್ ಖಾತೆಗಳನ್ನೂ ಏಕ್ಸಿಸ್ ಬ್ಯಾಂಕ್ ನಿಂದ ವರ್ಗಾಯಿಸಲು ಚಿಂತನೆ ನಡೆದಿದೆಯಂತೆ.