Publish Date: Wed, 25 Dec 2019 (10:52 IST)
Updated Date: Wed, 25 Dec 2019 (10:54 IST)
ಮಂಡ್ಯ : ಕೆ.ಆರ್.ಪೇಟೆ ಬೈಎಲೆಕ್ಷನ್ ನಲ್ಲಿ ನಮ್ಮ ಸೋಲಿಗೆ ಕಾಂಗ್ರಸ್ ಪ್ರಮುಖ ಕಾರಣ. ರೂ.15ನಕೋಟಿಗೆ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿಗೆ ಸೇಲಾಗಿದ್ರು ಎಂದು ಜೆಡಿಎಸ್ ತಾ.ಪಂ.ಸದಸ್ಯ ದಿನೇಶ್ ರಾಜಾಹುಲಿ ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯದಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ದಿನೇಶ್ ರಾಜಾಹುಲಿ, ಕೈ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ರೂ.15ನಕೋಟಿಗೆ ಬಿಜೆಪಿಗೆ ಸೇಲಾಗಿದ್ರು. ಈ ವಿಚಾರ ಜನರಿಗೆ ಗೊತ್ತಾಗಲಿಲ್ಲ. ಆದ್ರೆ ಕೆಲ ಕಾಂಗ್ರೆಸ್ ಕಾರ್ಯಕರ್ತರಿಗೆ ಈ ವಿಷಯ ತಿಳಿದು ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಿದ್ದರು. ಕೆ.ಆರ್.ಪೇಟೆಯ ಬೈಎಲೆಕ್ಷನ್ ನಲ್ಲಿ ಜೆಡಿಎಸ್ ಪಕ್ಷ ಸೋತಿಲ್ಲ. 57ಸಾವಿರ ಮತಗಳನ್ನು ಪಡೆದು ತನ್ನ ಶಕ್ತಿ ಹೆಚ್ಚಿಸಿಕೊಂಡಿದೆ ಎಂದು ಹೇಳಿದ್ದಾರೆ.