Select Your Language

Notifications

webdunia
webdunia
webdunia
webdunia

ವಿವಾಹಿತ ಪ್ರೇಯಸಿಯನ್ನು ಕೊಂದ ಪ್ರಿಯಕರ ಮಾಡಿದ್ದೇನು ಗೊತ್ತಾ?

ಮುಂಬೈ
ಮುಂಬೈ , ಶನಿವಾರ, 28 ಡಿಸೆಂಬರ್ 2019 (06:29 IST)
ಮುಂಬೈ : ತನ್ನ ಮಾಜಿ ಪ್ರೇಯಸಿಯನ್ನು ಕೊಲೆ ಮಾಡಿದ ವ್ಯಕ್ತಿಯೊಬ್ಬ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಆಕೆಯ ಪೋನಿನಿಂದ ಅವಳ ತಂದೆಗೆ ಮಸೇಜ್ ಕಳುಹಿಸಿದ ಘಟನೆ ಮಹಾರಾಷ್ಟ್ರದ ಜಲ್ನಾದಲ್ಲಿ ನಡೆದಿದೆ.



ದೀಪಾಲಿ ಕೊಲೆಯಾದ ಮಹಿಳೆ. ಸಚಿವ ಕೊಲೆ ಮಾಡಿದ ವ್ಯಕ್ತಿ. ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ದೀಪಾಲಿಗೆ ಸಚಿವ ಜೊತೆ ಸಂಬಂಧವಿತ್ತು. ಯಾವುದೋ ವಿಚಾರಕ್ಕೆ ಇವರಿಬ್ಬರ ನಡುವೆ ಜಗಳ ಶುರುವಾಗಿ ಸಚಿವ ದೀಪಾಲಿಯನ್ನು ಹೊಡೆದು ಕೊಲೆ ಮಾಡಿ  ಆಕೆಯ ಪೋನಿನಿಂದ ಅವಳ ತಂದೆಗೆ ಮಸೇಜ್ ಕಳುಹಿಸಿ ಪರಾರಿಯಾಗಿದ್ದಾನೆ.


ರೈಲ್ವೆ ಹಳಿ ಮೇಲೆ ದೀಪಾಲಿ ಶವ ಪತ್ತೆಯಾಗಿದ್ದು ಜೊತೆಗೆ ಪತಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಬರೆದಿದ್ದ ಹಿನ್ನಲೆಯಲ್ಲಿ ದೀಪಾಲಿ ಪತಿಯನ್ನು ಅರೆಸ್ಟ್ ಮಾಡಲಾಗಿದೆ. ಆದರೆ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಸತ್ಯಾಂಶ ತಿಳಿದು ಸಚಿವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನಲೆಯಲ್ಲಿ  ಆರೋಪಿ ಸಚಿನ್ ವಿರುದ್ಧ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯಗ್ರಹಣದ ವೇಳೆ ಜನರು ಮೊಟ್ಟೆಗಳನ್ನು ರಸ್ತೆಯ ಮೇಲೆ ಲಂಬವಾಗಿ ನಿಲ್ಲಿಸಿದ್ದೇಕೆ?