ಬಿಹಾರ: ಕಳೆದ ವಾರ ಬಿಹಾರದಲ್ಲಿ ಕಾಂಗ್ರೆಸ್ ನಾಯಕರ 'ಮತದಾರ ಅಧಿಕಾರ ಯಾತ್ರೆ' ವೇಳೆ ತನ್ನ ತಾಯಿಯನ್ನು ನಿಂದಿಸಿರುವುದು ತುಂಬಾನೇ ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೋವು ತೋಡಿಕೊಂಡರು.
ತನ್ನ ದಿವಂಗತ ತಾಯಿ ಬಗ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಆಡಿದ ನಿಂದನೀಯ ಭಾಷೆ ಬಗ್ಗೆ ಪ್ರಧಾನಿ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. ಇದು ತುಂಬಾನೇ ನೋವಿನ ಸಂಗತಿ ಎಂದು ಕರೆದರು.
ಬಿಹಾರ ರಾಜ್ಯ ಜೀವಿಕಾ ನಿಧಿ ಶಾಖ್ ಸಹಕಾರಿ ಸಂಘ ಲಿಮಿಟೆಡ್ ಬಿಡುಗಡೆ ಸಮಾರಂಭದಲ್ಲಿ ಈ ವಿಷಯದ ಕುರಿತು ಮಾತನಾಡಿದರು.
ಇದು ಬಿಹಾರದ ಎಲ್ಲಾ ತಾಯಂದಿರು ಮತ್ತು ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ ಎಂದು ಪ್ರಧಾನಿ ಮೋದಿ ತಮ್ಮ ಧ್ವನಿಯನ್ನು ಬಿಚ್ಚಿಟ್ಟರು.
ಕಳೆದ ವಾರ ಬುಧವಾರ ಬೆಳಿಗ್ಗೆ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮೋಟಾರ್‌ಸೈಕಲ್‌ನಲ್ಲಿ ಮುಜಫ್ಫರ್‌ಪುರಕ್ಕೆ ತೆರಳಿದಾಗ ಯಾತ್ರೆ ವೇಳೆ ಮೋದಿ ತಾಯಿ ವಿರುದ್ಧ ನಿಂದನಿಯ ಪದಗಳನ್ನು ಬಳಸಿದ್ದರು. ಈ ವಿಚಾರವಾಗಿ ಬಿಜೆಪಿ ನಾಯಕರು ಆಕ್ರೋಶವನ್ನು ಹೊರಹಾಕಿದ್ದರು.
ನಿಮ್ಮಂತಹ ಕೋಟಿ ತಾಯಂದಿರ ಸೇವೆ ಮಾಡಲು ನನ್ನ ತಾಯಿ ನನ್ನನ್ನು ಬೇರ್ಪಡಿಸಿದರು. ಈಗ ನನ್ನ ತಾಯಿ ಬದುಕಿಲ್ಲ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಕೆಲವು ಸಮಯದ ಹಿಂದೆ 100 ವರ್ಷ ಪೂರೈಸಿದ ನಂತರ ಅವರು ನಮ್ಮೆಲ್ಲರನ್ನು ತೊರೆದರು. ರಾಜಕೀಯಕ್ಕೆ ಸಂಬಂಧವಿಲ್ಲದ ಆ ನನ್ನ ತಾಯಿಯನ್ನು ಆರ್‌ಜೆಡಿ, ಕಾಂಗ್ರೆಸ್ ವೇದಿಕೆಯಿಂದ ನಿಂದಿಸಲಾಯಿತು ಎಂದು ಪ್ರಧಾನಿ ಮೋದಿ ಮಂಗಳವಾರ ಹೇಳಿದರು.
"ಆ ತಾಯಿಯ ತಪ್ಪೇನು."
ಭಾರತ ಮಾತೆಯನ್ನು ಅವಮಾನಿಸುವವರಿಗೆ ನನ್ನ ತಾಯಿಯನ್ನು ನಿಂದಿಸುವುದು ಏನೂ ಅಲ್ಲ. ಅಂತಹವರಿಗೆ ಶಿಕ್ಷೆಯಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ತನ್ನ ತಾಯಿಯು ತನ್ನನ್ನು ಹೇಗೆ ಬೆಳೆಸಿದಳು ಎಂದು ನೆನಪಿಸಿಕೊಂಡ ಪ್ರಧಾನಿ ಮೋದಿ, ಅವಳು ತನ್ನನ್ನು ಮತ್ತು ಕುಟುಂಬವನ್ನು ಕಡು ಬಡತನದಲ್ಲಿ ಬೆಳೆಸಿದಳು, "ಅವಳು ತನಗಾಗಿ ಎಂದಿಗೂ ಹೊಸ ಸೀರೆಯನ್ನು ಖರೀದಿಸುವುದಿಲ್ಲ ಮತ್ತು ನಮ್ಮ ಕುಟುಂಬಕ್ಕಾಗಿ ಪ್ರತಿ ಪೈಸೆಯನ್ನು ಉಳಿಸುತ್ತಾಳೆ" ಎಂದು ಹೇಳಿದರು.
ತೇಜಸ್ವಿ ಯಾದವ್ ಮತ್ತು ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ರಾಜಮನೆತನದಲ್ಲಿ ಜನಿಸಿದ ಈ ಯುವರಾಜರಿಗೆ ಬಡ ತಾಯಿಯ 'ತಪಸ್ಸು' ಮತ್ತು ಅವಳ ಮಗನ ನೋವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.