ಪಾಟ್ನಾ: ಬಿಜೆಪಿಗೆ ಮಹದೇವಪುರದಲ್ಲಿ ತೋರಿಸಿರುವುದು ಕೇವಲ ಆಟಂ ಬಾಂಬ್, ಮತಕಳ್ಳತನದ ಆರೋಪಗಳ ಬಗ್ಗೆ ಶೀಘ್ರದಲ್ಲೇ ಹೈಡ್ರೋಜನ್ ಬಾಂಬ್ ಅನ್ನು ಸಿಡಿಸುವುದಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಚ್ಚರಿಸಿದರು.
ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ಎಲ್‌ಪಿ ರಾಹುಲ್ ಗಾಂಧಿ ಅವರು ಸೋಮವಾರ ಮತದಾರ ಅಧಿಕಾರ ಯಾತ್ರೆಯ ಕೊನೆಯ ದಿನದಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿಯನ್ನು ಕೊಂದ ಶಕ್ತಿಗಳು ಈಗ ಭಾರತದ ಸಂವಿಧಾನವನ್ನು ನಾಶಮಾಡಲು ಪ್ರಯತ್ನಿಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಭಾರತದ ಸಂವಿಧಾನವನ್ನು ನಾಶಮಾಡಲು ನಾವು ಬಿಡುವುದಿಲ್ಲ.ಯಾತ್ರೆಯಲ್ಲಿ ನಮಗೆ ಸಾಕಷ್ಟು ಬೆಂಬಲ ಸಿಕ್ಕಿತು. ಬಿಹಾರದ ಪ್ರತಿಯೊಬ್ಬ ಯುವಕರು, ಮಕ್ಕಳು ನಮ್ಮೊಂದಿಗೆ ನಿಂತರು. ನಾನು ಬಿಜೆಪಿಯವರಿಗೆ ಹೇಳಲು ಬಯಸುತ್ತೇನೆ, ಮಹದೇವಪುರದಲ್ಲಿ ನಾವು ಹೈಡ್ರೋಜನ್ ಬಾಂಬ್ ಅನ್ನು ತೋರಿಸುತ್ತೇವೆ, ಆದರೆ ಶೀಘ್ರದಲ್ಲೇ ನಾವು ಹೈಡ್ರೋಜನ್ ಬಾಂಬ್ ಅನ್ನು ತೋರಿಸುತ್ತೇವೆ.