Publish Date: Tue, 14 Dec 2021 (15:34 IST)
Updated Date: Tue, 14 Dec 2021 (15:39 IST)
ಭೋಪಾಲ್ : ಬಲವಂತವಾಗಿ ಸೆಕ್ಸ್ ಮಾಡಲು ಮುಂದಾದ ಪತಿಯ ಮರ್ಮಾಂಗವನ್ನೇ ಪತ್ನಿ ಕತ್ತರಿಸಿರುವ ವಿಲಕ್ಷಣ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಘಟನೆ ಮಧ್ಯಪ್ರದೇಶದ ಟಿಕಮ್ ಗಢ ಜಿಲ್ಲೆಯಲ್ಲಿ ಡಿಸೆಂಬರ್ 7ರಂದು ನಡೆದಿದೆ. ತನ್ನ ಸ್ವ-ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದ ಸೆಕ್ಸ್ ಮಾಡುವಂತೆ ಒತ್ತಡ ಹಾಕಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಪತಿಯ ಕಿರುಕುಳದಿಂದ ಬೇಸತ್ತ 24 ವರ್ಷದ ಪತ್ತನ ರೊಚ್ಚಿಗೆದ್ದು 27 ವರ್ಷದ ಪತಿಯ ಮರ್ಮಾಂಗವನ್ನು ಹರಿತವಾದ ಆಯುಧದಿಂದ ಕತ್ತರಿಸಿ ಬಿಟ್ಟಿದ್ದಾಳೆ.
ಪತಿ ಹಾಗೂ ಪತ್ನಿ ಮಧ್ಯೆ ದೈಹಿಕ ಸಂಬಂಧದ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಹೀಗಿರುವಾಗಿ ಪತಿ ಪ್ರತಿನಿತ್ಯ ಸೆಕ್ಸ್ ಮಾಡುವಂತೆ ಒತ್ತಡ ಹೇರುತ್ತಿದ್ದನು. ಆದರೆ ಇದು ಪತ್ನಿಗೆ ಇಷ್ಟವಿರಲಿಲ್ಲ. ಹೀಗಾಗಿ ಬಲವಂತವಾಗಿ ಸೆಕ್ಸ್ ಮಾಡಲು ಮುಂದಾದಾಗ ಸಿಟ್ಟಿನಿಂದ ಪತ್ನಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ .
ಈ ಘಟನೆ ಡಿ.7ರಂದು ರಾತ್ರಿ ನಡೆದಿದ್ದು, ಕೂಡಲೇ ಆತ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಡಿ.13ರಂದು ಸಂತ್ರಸ್ತ ಠಾಣೆಗೆ ಬಂದು ದೂರು ನೀಡಿದ್ದಾನೆ. ಇಬ್ಬರ ನಡುವೆ ಮತ್ತೆ ಜಗಳವಾಗಿದ್ದು, ಪರಿಣಾಮ ಪತ್ನಿ ಈ ಮೂಲಕ ಪತಿಗೆ ಬುದ್ಧಿ ಕಲಿಸಿದ್ದಾಳೆ.