ನವದೆಹಲಿ: 2017 ನೇ ಸಾಲಿನ ವಿಶ್ವಸುಂದರಿಯಾಗಿ ಆಯ್ಕೆಯಾದ ಭಾರತದ ಮಾನುಷಿ ಚಿಲ್ಲರ್ ಗೆ ಅಭಿನಂದಿಸುವ ಭರದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವಮಾನ ಮಾಡಿ ವಿವಾದಕ್ಕೀಡಾಗಿದ್ದಾರೆ.
ವಿಶ್ವಸುಂದರಿ ವಿಜೇತಳಿಗೆ ಅಭಿನಂದಿಸುವಾಗಲೂ ರಾಜಕೀಯ ಬೆರೆಸಲು ಹೋಗಿ ಸಾಮಾಜಿಕ ಜಾಲತಾಣದಲ್ಲಿ ಹಿಂಬಾಲಕರಿಂದ ತಿರುಗೇಟು ಪಡೆದಿದ್ದಾರೆ.
ಮಾನುಷಿ ಹೆಸರಿನ ಜತೆ ಇರುವ ಚಿಲ್ಲರ್ ಎಂಬ ನಾಮಧೇಯವನ್ನು ಬಳಸಿ ಶಶಿ ತರೂರ್ ಪ್ರಧಾನಿ ಮೋದಿಗೆ ಟಾಂಗ್ ಕೊಡಲು ಹೊರಟಿದ್ದರು. ‘ನಮ್ಮ ನೋಟು ಅಮಾನ್ಯದಿಂದಾಗಿ ಎಷ್ಟು ದೊಡ್ಡ ತಪ್ಪಾಗಿದೆ ನೋಡಿ. ಭಾರತದ ನಗದು ಇಡೀ ಜಗತ್ತಿನಲ್ಲೇ ಪಾರಮ್ಯ ಮೆರೆದಿದೆ ಎನ್ನುವುದನ್ನು ಬಿಜೆಪಿ ಮನವರಿಕೆ ಮಾಡಿಕೊಳ್ಳಬೇಕಿತ್ತು. ಈಗ ನೋಡಿ, ನಮ್ಮ ‘ಚಿಲ್ಲರ್’ ಮಿಸ್ ವರ್ಲ್ಡ್ ಆಗಿದೆ’ ಎಂದು ಟ್ವೀಟ್ ಮಾಡಿದ್ದರು.
ಆದರೆ ಈ ಟ್ವೀಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿರುವುದಲ್ಲದೆ, ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ