Publish Date: Mon, 20 Nov 2017 (08:28 IST)
Updated Date: Mon, 20 Nov 2017 (08:30 IST)
ಬೆಂಗಳೂರು: ಖಾಸಗಿ ವೈದ್ಯರ ಹಣೆಬರಹ ನಿರ್ಧರಿಸುವ ಖಾಸಗಿ ಆಸ್ಪತ್ರೆ ವಿಧೇಯಕ ತಿದ್ದುಪಡಿ ಮಾಡುವ ಕುರಿತಂತೆ ಇಂದು ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಸಭೆ ನಡೆಸಲಿದ್ದಾರೆ.
ಕೆಪಿಎಂ ಖಾಯಿದೆ ವಿಧೇಯಕಕ್ಕೆ ಕೆಲವು ಮಾರ್ಪಾಡು ತರುವ ನಿಟ್ಟಿನಲ್ಲಿ ಸಿಎಂ ಇಂದು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಮಹತ್ವದ ಸಭೆ ನಡೆಸಿ ಚರ್ಚಿಸಲಿದ್ದಾರೆ.
ತಿದ್ದುಪಡಿಯೊಂದಿಗೆ ಸದನದಲ್ಲಿ ವಿಧೇಯಕ ಮಂಡಿಸಲು ಸಿಎಂ ಸಮಾಲೋಚನೆ ನಡೆಸಲಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗಲಿದೆ. ಆದರೆ ಪ್ರತಿಪಕ್ಷ ಬಿಜೆಪಿ ಇಂದೂ ಕೂಡಾ ಕೆಜೆ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮುಂದುವರಿಸುವ ನಿರೀಕ್ಷೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ