Select Your Language

Notifications

webdunia
webdunia
webdunia
webdunia

ಮಧ್ವರಾಜ್ ನೀನು ಬಿಜೆಪಿ ಸೇರುತ್ತೀಯಾ?: ಸಿಎಂ ನೇರ ಪ್ರಶ್ನೆ

ಮಧ್ವರಾಜ್ ನೀನು ಬಿಜೆಪಿ ಸೇರುತ್ತೀಯಾ?: ಸಿಎಂ ನೇರ ಪ್ರಶ್ನೆ
ಮಂಗಳೂರು , ಭಾನುವಾರ, 19 ನವೆಂಬರ್ 2017 (14:35 IST)
ಕಾಂಗ್ರೆಸ್ ಶಾಸಕ ಪ್ರಮೋದ್ ಮದ್ವರಾಜ್ ಬಿಜೆಪಿ ಸೇರಲಿದ್ದಾರೆ ಎನ್ನುವ ಉಹಾಪೋಹ, ವದಂತಿಗಳಿಗೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.
 
ಸುದ್ದಿಗಾರರ ಸಮ್ಮುಖದಲ್ಲಿಯೇ ಶಾಸಕ ಮದ್ವರಾಜ್ ಅವರನ್ನು ಕರೆದ ಸಿಎಂ ಸಿದ್ದರಾಮಯ್ಯ, ಏನಪ್ಪಾ ನೀನವು ಬಿಜೆಪಿ ಸೇರುತ್ತೀಯಾ? ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರ ನೀಡಿಗ ಮದ್ವರಾಜ್, ನಾನು ಬಿಜೆಪಿ ಸೇರುವ ವದಂತಿಗಳು ಸುಳ್ಳು ನಾನು ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ ಎಂದರು.
 
ಬಿಜೆಪಿಯವರು ಅನಗತ್ಯ ಗೊಂದಲ, ಸುಳ್ಳು ಹೇಳುವುದೇ ಕಾಯಕವಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತೊರೆದು ಯಾರೂ ಬಿಜೆಪಿ ಪಕ್ಷಕ್ಕೆ ಹೋಗುತ್ತಿಲ್ಲ. ಆದರೆ, ಬಿಜೆಪಿಯ ಹಲವು ಮುಖಂಡರು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ನನ್ನೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿರುಗೇಟು ನೀಡಿದರು.
 
ಆರೆಸ್ಸೆಸ್ ಮುಖಂಡರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ,ಆರೆಸ್ಸೆಸ್ ಮುಖಂಡರನ್ನು ಪಕ್ಷಕ್ಕೆ ಸೇರ್ಪಗೊಳಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಪಕ್ಷಗಳನ್ನು ಹಣಿಯಲು ಬಿಜೆಪಿಯಿಂದ ಚುನಾವಣೆಯಲ್ಲಿ ವಾಟ್ಸಪ್ ಸಮರ