Publish Date: Sun, 19 Nov 2017 (10:14 IST)
Updated Date: Sun, 19 Nov 2017 (10:16 IST)
ಮಂಗಳೂರು: ಬಿ.ಆರ್. ಶೆಟ್ಟಿ ಮಾಲಿಕತ್ವದ ಆಸ್ಪತ್ರೆ ಉದ್ಘಾಟನೆಗೆ ಉಡುಪಿಗೆ ಇಂದು ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಕೃಷ್ಣ ಮಠಕ್ಕೆ ಇಂದಾದರೂ ಭೇಟಿಯಾಗುತ್ತಾರಾ ಎಂಬ ಚರ್ಚೆಗಳು ನಡೆದಿವೆ.
ಇದುವರೆಗೆ ಸಿಎಂ ನಾಲ್ಕು ಬಾರಿ ಉಡುಪಿಗೆ ಬಂದು ಕೃಷ್ಣ ಮಠಕ್ಕೆ ಬರುವ ಅವಕಾಶಗಳಿದ್ದಾಗಲೂ ತಪ್ಪಿಸಿಕೊಂಡಿದ್ದರು. ಕಳೆದ ಬಾರಿ ರಾಷ್ಟ್ರಪತಿ ಭೇಟಿ ಸಂದರ್ಭ ಪ್ರೊಟೋಕಾಲ್ ಇದ್ದರೂ ತಪ್ಪಿಸಿಕೊಂಡಿದ್ದರು.
ಇಂದು ಉಡುಪಿ ಮಠದ ಸಮೀಪದಲ್ಲೇ ಕಾರ್ಯಕ್ರಮ ನಡೆಯುತ್ತಿದ್ದು, ಮತ್ತೆ ಸಿಎಂ ಕೃಷ್ಣ ಮಠದ ಭೇಟಿ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಈ ಬಾರಿಯೂ ಸಿಎಂ ಭೇಟಿ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ