Publish Date: Tue, 09 May 2017 (10:54 IST)
Updated Date: Tue, 09 May 2017 (11:01 IST)
ನವದೆಹಲಿ: ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅನುಮಾನಸ್ಪದ ಸಾವಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸುನಂದಾ ಸಾವಿನ ಬಗ್ಗೆ ಶಶಿ ತರೂರ್ ಗೆ ಗೊತ್ತಿತ್ತು ಎಂದು ಖಾಸಗಿ ವಾಹಿನಿಯೊಂದು ಆರೋಪಿಸಿದೆ.
ಸುನಂದಾ ಪುಷ್ಕರ್ ಸಾವಿಗೂ ಮೊದಲು ಕೆಲವು ರಹಸ್ಯಗಳನ್ನು ಹೊರಗೆಳೆಯಲು ಬಯಸಿದ್ದರು. ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿದ್ದ ಅವರು ಈ ಬಗ್ಗೆ ಅವರು ತಮ್ಮ ಆಪ್ತ ಪತ್ರಕರ್ತರಿಗೆ ಬೆಳಗಿನ ಜಾವ ಸಂದೇಶವನ್ನೂ ಕಳುಹಿಸಿದ್ದರು. ಆದರೆ ಅದಕ್ಕಿಂತ ಮೊದಲೇ ಅವರ ಕೊಲೆಯಾಗಿತ್ತು ಎಂದು ಟಿವಿ ವಾಹಿನಿ ವರದಿ ಮಾಡಿದೆ.
ಅಲ್ಲದೆ, ಸುನಂದಾ ಕೊಲೆಯಾಗಿದ್ದು, 307 ನೇ ನಂಬರ್ ಕೊಠಡಿಯಲ್ಲಿ ಮತ್ತು ಅವರ ದೇಹ ಸಿಕ್ಕಿದ್ದು 345 ನಂಬರ್ ಕೊಠಡಿಯಲ್ಲಿ. ಅವರ ದೇಹವನ್ನು ಒಂದು ಕೊಠಡಿಯಿಂದ ಇನ್ನೊಂದು ಕೊಠಡಿಗೆ ಸ್ಥಳಾಂತರಿಸಲಾಗಿತ್ತು ಎಂದು ವಾಹಿನಿ ಆರೋಪಿಸಿದೆ.
ತರೂರ್ ಅವರು ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್ ಜತೆಗೆ ಸ್ನೇಹ ಸಂಬಂಧ ಹೊಂದಿದ್ದರು. ಇದೇ ಕಾರಣಕ್ಕೆ ಸಾಯುವ ಮೊದಲು ಸುನಂದಾ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ವಾಹಿನಿ ವಿವರಿಸಿದೆ.
ಸುನಂದಾ ಕೊಲೆಯಾಗುವ ಮೊದಲು ತರೂರ್ ರೊಂದಿಗೆ ವಾಗ್ವಾದ ನಡೆದಿತ್ತು. ಹಾಗೂ ಪಾಕ್ ಪತ್ರಕರ್ತೆ ಮತ್ತು ತರೂರ್ ಸಹಾಯಕರ ನಡುವೆ 19 ಬಾರಿ ಫೋನ್ ಸಂಭಾಷಣೆ ನಡೆದಿತ್ತು ಎಂದು ವಾಹಿನಿ ವರದಿ ಮಾಡಿದೆ. ಅಲ್ಲದೆ ಸುನಂದಾ ಸಾಯುವಾಗ ಸಹಾಯಕ ಅದೇ ಹೋಟೆಲ್ ನಲ್ಲಿದ್ದ ಎಂದು ಅನುಮಾನ ವ್ಯಕ್ತಪಡಿಸಿದೆ.
2014 ರಲ್ಲಿ ಸುನಂದಾ ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು. ಆರಂಭದಲ್ಲಿ ಇದೊಂದು ಆತ್ಮಹತ್ಯೆ ಎನ್ನಲಾಗಿತ್ತು. ಆದರೆ ನಂತರ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ದೇಹಕ್ಕೆ ವಿಷ ಇಂಜೆಕ್ಟ್ ಆಗಿತ್ತು ಎನ್ನುವುದು ಪತ್ತೆಯಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ