Select Your Language

Notifications

webdunia
webdunia
webdunia
webdunia

ಸೋನಿಯಾ ಗಾಂಧಿ, ದೇವೇಗೌಡ, ನಾನು ಜತೆಯಾಗಿದ್ದರೆ ವಿಪಕ್ಷಗಳು ಒಂದು ಮಾಡಬಹುದು ಎಂದವರು ಯಾರು?

ಸೋನಿಯಾ ಗಾಂಧಿ, ದೇವೇಗೌಡ, ನಾನು ಜತೆಯಾಗಿದ್ದರೆ ವಿಪಕ್ಷಗಳು ಒಂದು ಮಾಡಬಹುದು ಎಂದವರು ಯಾರು?
ನವದೆಹಲಿ , ಸೋಮವಾರ, 6 ಆಗಸ್ಟ್ 2018 (10:23 IST)
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ವಿಪಕ್ಷಗಳನ್ನು ಒಂದುಗೂಡಿಸಲು ಬೇರೆ ಯಾರೂ ಬೇಡ. ನನ್ನ ಜತೆಗೆ ಸೋನಿಯಾ ಗಾಂಧಿ, ದೇವೇಗೌಡ ಅವರಿದ್ದರೆ ಸಾಕು. ಹೀಗಂತ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿಕೊಂಡಿದ್ದಾರೆ.

ಪ್ರಧಾನಿ ಪಟ್ಟದ ಮೇಲೆ ಯಾವುದೇ ಆಕಾಂಕ್ಷೆ ಇಲ್ಲದ ನಾವು ಮೂವರು ಪ್ರಯತ್ನ ಪಟ್ಟರೆ ವಿಪಕ್ಷಗಳು ಒಂದಾಗುತ್ತವೆ ಮತ್ತು ಬಿಜೆಪಿಯನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೋಲಿಸುತ್ತದೆ ಎಂದ ಶರದ್ ಪವಾರ್ ಹೇಳಿಕೊಂಡಿದ್ದಾರೆ.

ಖಾಸಗಿ ವಾಹಿನಿಯೊಂದಿಗೆ ನೀಡಿದ ಸಂದರ್ಶನದಲ್ಲಿ  ಮಾತನಾಡಿರುವ ಶರದ್ ಪವಾರ್ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ವಿಪಕ್ಷಗಳು ರಾಜ್ಯಮಟ್ಟದಲ್ಲೇ ಮೈತ್ರಿ ಮಾಡಿಕೊಳ್ಳಬೇಕು. ಪ್ರಧಾನಿ ಮೋದಿ ಕೂಡಾ ಮಾಧ್ಯಮ, ಸರ್ಕಾರಿ ಸಂಸ್ಥೆಗಳ ಮೇಲೆ ತಮ್ಮ ಪ್ರಭುತ್ವ ಸಾಧಿಸಿ ಇಂದಿರಾ ಗಾಂಧಿಯವರಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಮೋದಿ ವಿರೋಧಿ ಅಲೆ ಸೃಷ್ಟಿಯಾಗಿದೆ ಎಂದು ಪವಾರ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಇಮ್ರಾನ್ ಖಾನ್ ಪದಗ್ರಹಣ ಸಮಾರಂಭಕ್ಕೆ ಸುನಿಲ್ ಗವಾಸ್ಕರ್ ಹೋಗ್ತಾರಾ?