Select Your Language

Notifications

webdunia
webdunia
webdunia
webdunia

ಬಾಂಗ್ಲಾದೇಶದ ಅಕ್ರಮ ವಲಸಿಗರು ಭಾರತದಲ್ಲೇ ಇರಬೇಕಾ? ವಿಪಕ್ಷಗಳಿಗೆ ಅಮಿತ್ ಶಾ ಪ್ರಶ್ನೆ

ಬಾಂಗ್ಲಾದೇಶದ ಅಕ್ರಮ ವಲಸಿಗರು ಭಾರತದಲ್ಲೇ ಇರಬೇಕಾ? ವಿಪಕ್ಷಗಳಿಗೆ ಅಮಿತ್ ಶಾ ಪ್ರಶ್ನೆ
ನವದೆಹಲಿ , ಸೋಮವಾರ, 6 ಆಗಸ್ಟ್ 2018 (09:27 IST)
ನವದೆಹಲಿ: ಕಾಂಗ್ರೆಸ್, ಎಸ್ ಪಿ, ಬಿಎಸ್ ಪಿ, ಟಿಎಂಸಿಯಂತಹ ಪಕ್ಷಗಳಿಗೆ ಬಾಂಗ್ಲಾದೇಶದ ಅಕ್ರಮ ವಲಸಿಗರು ಭಾರತದಲ್ಲೇ ಇರಬೇಕೆಂಬ ಆಸೆಯಾ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಶ್ನಿಸಿದ್ದಾರೆ.

ಅಕ್ರಮ ವಲಸಿಗರನ್ನು ಗುರುತಿಸಲು ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ಟಿಎಂಸಿ ಸೇರಿದಂತೆ ಕೆಲವು ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಅವರು ಈ ರೀತಿ ಪ್ರಶ್ನೆ ಮಾಡಿದ್ದಾರೆ.

‘ಬಾಂಗ್ಲಾದೇಶೀ ಅಕ್ರಮ ವಲಸಿಗರನ್ನು ಇಲ್ಲಿಯೇ ಇರಿಸಬೇಕಾ ಅಥವಾ ಹೊರಗೆ ಕಳುಹಿಸಬೇಕಾ? ಎಸ್ಪಿ, ಕಾಂಗ್ರೆಸ್, ಬಿಎಸ್ ಪಿಗೆ ನಾನು ಈ ವಿಚಾರದಲ್ಲಿ ತಮ್ಮ ನಿಲುವು ಏನೆಂದು ಸ್ಪಷ್ಟಪಡಿಸಲು ಆಗ್ರಹಿಸುತ್ತೇನೆ’ ಎಂದು ಅಮಿತ್ ಶಾ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಕರುಣಾನಿಧಿಗೆ ಇನ್ನೆಷ್ಟು ದಿನ ಆಸ್ಪತ್ರೆ ವಾಸ?