Select Your Language

Notifications

webdunia
webdunia
webdunia
webdunia

ಕರ್ನಾಟಕಕ್ಕೆ ಕಾಲಿಡುವುದೇ ಶರದ್‌ ಪವಾರ್‌ ಸಾರಥ್ಯದ ಎನ್‌ ಸಿಪಿ?

sharad pawar ncp karnataka ಶರದ್‌ ಪವಾರ್‌ ಎನ್‌ ಸಿಪಿ ಕರ್ನಾಟಕ
bengaluru , ಸೋಮವಾರ, 18 ಏಪ್ರಿಲ್ 2022 (15:04 IST)
ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳ ನಡುವೆ ಜಾತ್ಯತೀತ ಜನತಾದಳ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಮಧ್ಯೆ ಎರಡು ಪಕ್ಷಗಳು ರಾಜ್ಯಕ್ಕೆ ಕಾಲಿಡುತ್ತಿವೆ.
ದೆಹಲಿ ಮತ್ತು ಪಂಜಾಬ್‌ ಗಳಲ್ಲಿ ಅಧಿಕಾರ ಹಿಡಿಯುವ ಮೂಲಕ ಹೊಸ ಅಲೆ ಎಬ್ಬಿಸಿರುವ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಲಿಡಲು ಸಿದ್ಧತೆ ನಡೆಸಿರುವ ಮಧ್ಯೆಯೇ ಇದೀಗ ಮಾಜಿ ಕೇಂದ್ರ ಸಚಿವ ಶರದ್‌  ಪವಾರ್‌ ನೇತೃತ್ವದ ಇಂಡಿಯನ್‌ ಪೊಲಿಟಿಕಲ್‌ ಪಾರ್ಟಿ ಕೂಡ ಕರ್ನಾಟಕಕ್ಕೆ ಕಾಲಿಡಲು ಸಿದ್ಧತೆ ಆರಂಭಿಸಿದೆ.
ಮಹಾರಾಷ್ಟ್ರದಲ್ಲಿ ಈಗಾಗಲೇ ಶಿವಸೇನೆ ಮತ್ತು ಕಾಂಗ್ರೆಸ್‌ ಜೊತೆಗೂಡಿ ಸರಕಾರದಲ್ಲಿ ಭಾಗವಾಗಿರುವ ಎನ್‌ ಸಿಪಿ ಇದೀಗ ಕರ್ನಾಟಕದಲ್ಲಿ ತನ್ನ ಶಾಖೆ ಆರಂಭಿಸಲಿ ಎಂದು ಮೂಲಗಳು ಹೇಳಿವೆ.
ಕರ್ನಾಟಕದಲ್ಲಿ ತನ್ನ ಶಾಖೆ ಆರಂಭಿಸಲು ಸಿದ್ಧತೆ ಹಿನ್ನೆಲೆಯಲ್ಲಿ ಶರದ್‌ ಪವಾರ್‌ ಬೆಂಗಳೂರಿಗೆ ಆಗಮಿಸಿದ್ದು, ಹಲವು ಮುಖಂಡರ ಜೊತೆ ಗೌಪ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೋಮವಾರ ಸಂಜೆ ಸುದ್ದಿಗೋಷ್ಠಿ ಕರೆದಿದ್ದು, ಕುತೂಹಲ ಮೂಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಬಿಜೆಪಿ ಸಚಿವರ ಪುತ್ರನ ಜಾಮೀನು ವಜಾ: ವಾರದೊಳಗೆ ಶರಣಾಗುವಂತೆ ಸೂಚನೆ!