Select Your Language

Notifications

webdunia
webdunia
webdunia
webdunia

ಹಿಂದೂ ಯುವತಿಯರನ್ನು ಗರ್ಭಿಣಿಯರಾಗಿ ಮಾಡುವುದೇ ನನ್ನ ಕೆಲಸ: ಶಾದ್ ಸಿದ್ದಿಕಿ

Shad Siddique

Krishnaveni K

ಇಂಧೋರ್ , ಭಾನುವಾರ, 5 ಅಕ್ಟೋಬರ್ 2025 (12:04 IST)
Photo Credit: X
ನಾನು ಮಚಲಿ ಗ್ಯಾಂಗ್ ನ ಸದಸ್ಯ. ಹಿಂದೂ ಯುವತಿಯರನ್ನು ಬಲೆಗೆ ಬೀಳಿಸಿ ಗರ್ಭಿಣಿಯರಾಗಿ ಮಾಡುವುದೇ ನನ್ನ ಕೆಲಸ, ಫ್ಯಾಶನ್ ಎಂದು ಶಾದ್ ಸಿದ್ದಿಕಿ ಎಂಬಾತ ಹೇಳಿಕೊಂಡಿದ್ದಾನೆ. ಈತನ ವಿರುದ್ಧ ಈಗ ಅತ್ಯಾಚಾರ ಆರೋಪ ಕೇಳಿಬಂದಿದೆ.

ಶಾದ್ ಸಿದ್ದಿಕಿ ಎಂಬಾತ ಸಚಿನ್ ಎಂದು ಹಿಂದೂ ಹೆಸರಿಟ್ಟುಕೊಂಡು 26 ವರ್ಷದ ಹಿಂದೂ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿದ್ದಾನೆ. ಯುವತಿಗೆ ಆತನ ನಿಜ ಧರ್ಮ ಗೊತ್ತಾದಾಗ ನಾನು ಮಚಲಿ ಗ್ಯಾಂಗ್ ಸದಸ್ಯ. ಹಿಂದೂ ಯುವತಿಯರನ್ನು ಗರ್ಭಿಣಿಯರಾಗಿ ಮಾಡುವುದೇ ನನ್ನ ಕೆಲಸ ಎಂದಿದ್ದಲ್ಲದೆ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಎರಡು ವರ್ಷಗಳ ಹಿಂದೆ ಭೋಪಾಲ್ ಗೆ ಕೆಲಸ ಹುಡುಕಿಕೊಂಡು ಬಂದಿದ್ದ ಯುವತಿಗೆ ಶಾದ್ ಸಿದ್ದಿಕಿ ಪರಿಚಯವಾಗಿತ್ತು. ತನ್ನನ್ನು ತಾನು ಸಚಿನ್ ಎಂದು ಪರಿಚಯಿಸಿದ್ದ ಶಾದ್ ಆಕೆಯ ಜೊತೆ ಸಲುಗೆ ಬೆಳೆಸಿಕೊಂಡಿದ್ದ. ಕೆಲವು ಸಮಯದ ಹಿಂದೆ ಯುವತಿ ಜೊತೆ ದೈಹಿಕ ಸಂಬಂಧ ಬೆಳೆಸಿದ್ದ. ಅಲ್ಲದೆ ಅದರ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡಿದ್ದ.

ಇದನ್ನು ಯುವತಿ ವಿರೋಧಿಸಿದಾಗ ಮದುವೆಯಾಗುವುದಾಗಿ ನಂಬಿಸಿದ್ದ. ಆದರೆ ನಂತರ ಆಕೆಗೆ ಆತ ಮುಸ್ಲಿಂ ಎನ್ನುವುದು ಗೊತ್ತಾಗಿತ್ತು. ಇದಾದ ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕು ಎಂದು ಒತ್ತಾಯಿಸುತ್ತಿದ್ದ ಮತ್ತು ಮುಸ್ಲಿಂ ಧರ್ಮದ ಆಚರಣೆಗಳನ್ನು ಪಾಲಿಸುವಂತೆ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಇದೀಗ ಈತನ ಬಗ್ಗೆ ತನಿಖೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಒಬ್ಬನನ್ನು ಸಮೀಕ್ಷೆ ಮಾಡಲು ಇಷ್ಟೊಂದು ಜನ ಬೇಕಾ: ವಿ ಸೋಮಣ್ಣ ಕ್ಲಾಸ್