ಮಂಡ್ಯ: ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟದ ಬಳಿಕ ಮಸೀದಿ ಬಗ್ಗೆ ಸ್ಥಳೀಯರು ಶಾಕಿಂಗ್ ವಿಚಾರಗಳನ್ನು ಹೊರಹಾಕಿದ್ದಾರೆ. ಮಸೀದಿ ಮುಂಭಾಗ ಹಿಂದೂಗಳು ಹೆಣ ತೆಗೆದುಕೊಂಡು ಹೋಗುವಾಗಲೂ ತಮಟೆ ಹೊಡೆಯಂಗಿಲ್ಲ ಎಂದಿದ್ದಾರೆ.
ಮದ್ದೂರಿನಲ್ಲಿರುವ ಈ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಇಲ್ಲಿ ದೇಶದ್ರೋಹದ ಚಟುವಟಿಕೆಗಳು ನಡೆಯುತ್ತಿವೆ. ರಾತ್ರಿ ವೇಳೆ ಯಾರು ಯಾರೋ ಬಂದು ಹೋಗುತ್ತಾರೆ ಎಂದೆಲ್ಲಾ ಸ್ಥಳೀಯರು ಜಿಲ್ಲಾಧಿಕಾರಿಗಳು ಮತ್ತು ಪ್ರಧಾನಿ ಮೋದಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರಂತೆ.
ಈ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಮಸೀದಿ ಮುಂದೆ ದೇವರ ಉತ್ಸವ, ಮೆರವಣಿಗೆ, ಹಿಂದೂಗಳು ಸತ್ತರೆ ತಮಟೆಯನ್ನೂ ಇಲ್ಲಿ ಬಾರಿಸದಂತೆ ನಿರ್ಬಂಧ ಹೇರಲಾಗಿದೆ. ಇದರ ಬಗ್ಗೆ ಸ್ಥಳೀಯಾಡಳಿತಕ್ಕೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ ಎನ್ನಲಾಗಿದೆ.
ಇದೇ ಮಸೀದಿಯಿಂದಲೇ ಮೊನ್ನೆ ಗಣೇಶ ಮೆರವಣಿಗೆ ವೇಳೆ ಲೈಟ್ ಆಫ್ ಮಾಡಿ ಕಲ್ಲು ತೂರಾಟ ನಡೆಸಲಾಗಿತ್ತು ಎಂದು ಹಿಂದೂಗಳು ಆರೋಪಿಸಿದ್ದರು. ಇದೀಗ ಅದೇ ಮಸೀದಿಯ ಬಗ್ಗೆ ಪ್ರಧಾನಿಗೆ, ಜಿಲ್ಲಾಧಿಕಾರಿಗಳಿಗೆ ನೀಡಲಾಗಿರುವ ದೂರಿನ ವಿವರ ಈ ಮೇಲಿನ ಫೋಟೋದಲ್ಲಿ ಕಾಣಬಹುದಾಗಿದೆ.