Publish Date: Sat, 31 May 2025 (09:46 IST)
Updated Date: Sat, 31 May 2025 (09:50 IST)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಭಯವಿದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಹಿಂದೂಗಳನ್ನು ಕೆರಳಿಸಿದೆ. ಬಂಟ್ವಾಳ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುವಾಗ ಡಿಕೆಶಿ ಈ ಹೇಳಿಕೆ ನೀಡಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಸರಣಿ ಕೊಲೆಗಳಾಗಿವೆ. ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮೊನ್ನೆಯಷ್ಟೇ ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಎಂಬ ಯುವಕನನ್ನು ಕೊಲೆ ಮಾಡಲಾಗಿತ್ತು. ಈ ಘಟನೆ ಬಳಿಕ ಮುಸ್ಲಿಮರು ಕಾಂಗ್ರೆಸ್ ವಿರುದ್ಧವೇ ಸಿಡಿದೆದ್ದಿರು.
ಇದರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಅಲ್ಪಸಂಖ್ಯಾತರು ಭಯದಲ್ಲಿದ್ದಾರೆ. ಇದನ್ನೆಲ್ಲಾ ನಿಲ್ಲಿಸ್ತೀವಿ. ನಮ್ಮ ಪಕ್ಷದಿಂದಲೇ ಒಂದು ಕಾರ್ಯಪಡೆಯನ್ನು ತಯಾರು ಮಾಡ್ತೀವಿ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದ ರೀತಿ ನೋಡಿಕೊಳ್ತೇವೆ ಎಂದಿದ್ದರು.
ಅವರ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಹಿಂದೂಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಾಗಿದ್ದರೆ ಇದಕ್ಕೆ ಮೊದಲು ಹತ್ಯೆಯಾದ ಹಿಂದೂಗಳ ಕತೆಯೇನು? ಹಿಂದೂ ಕಾರ್ಯಕರ್ತರು ಇಲ್ಲಿ ಸಾಕಷ್ಟು ಮಂದಿ ಕೊಲೆಯಾಗಿದ್ದಾರೆ. ಹಾಗಿದ್ದರೆ ಹಿಂದೂಗಳಿಗೆ ಭಯವಾಗಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.