Select Your Language

Notifications

webdunia
webdunia
webdunia
webdunia

ಹಿಂದೂ ನಾಯಕರ ಮೇಲೆ ಮಾತ್ರ ಕೇಸ್ ಯಾಕೆ, ತಲ್ವಾರ್ ಝಳಪಿಸಿದ ಮುಸ್ಲಿಂ ನಾಯಕರ ಮೇಲಿಲ್ಲ ಯಾಕೆ

Sunil Kumar

Krishnaveni K

ಬೆಂಗಳೂರು , ಸೋಮವಾರ, 2 ಜೂನ್ 2025 (14:01 IST)
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಪ್ರಚೋದನಕಾರೀ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಸರ್ಕಾರಕ್ಕೆ ಹಿಂದೂ ನಾಯಕರು ಮಾತ್ರ ಕಾಣ್ತಾರಾ? ತಲ್ವಾರ್ ಝಳಪಿಸಿದ ಮುಸ್ಲಿಂ ನಾಯಕರು ಕಾಣಲ್ವಾ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

ಬಂಟ್ವಾಳದಲ್ಲಿ ಮುಸ್ಲಿಂ ಯುವಕನ ಕೊಲೆ ಬಳಿಕ ಮುಸ್ಲಿಂ ನಾಯಕರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಹಿಂದೂ ನಾಯಕರ ಮೇಲೆ ಕೇಸ್ ಮತ್ತು ಗಡೀಪಾರಿನ ನೋಟಿಸ್ ನೀಡುತ್ತಿದೆ. ಇದರ ವಿರುದ್ಧ ಸುನಿಲ್ ಕುಮಾರ್ ಕಿಡಿ ಕಾರಿದ್ದಾರೆ.

ಕೋಮು ಪ್ರಚೋದನೆ ಭಾಷಣ ಮಾಡುವವರು ಕೇವಲ ಹಿಂದೂಗಳು ಮಾತ್ರವಾ? ಮುಸ್ಲಿಂ ನಾಯಕರಿಲ್ವಾ? ತಲ್ವಾರ್, ಕತ್ತಿ ಝಳಪಿಸಿ ಕೊಲೆ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಯಾಕಿಲ್ಲ? ರಾಜ್ಯ ಸರ್ಕಾರ ಹಿಂದೂ ನಾಯಕರಿಗೆ ನೋಟಿಸ್ ನೀಡುವ ಮೂಲಕ ತಾನೇ ಧ್ವೇಷಕ್ಕೆ ಪ್ರಚಾರ ನೀಡುತ್ತಿದೆ ಎಂದು ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ "ಪೊಲೀಸ್ ರಾಜ್" ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿದೆ. ದ್ವೇಷ ಭಾಷಣ ನಿಯಂತ್ರಣ ನೆಪದಲ್ಲಿ  ಕಲಡ್ಕ ಪ್ರಭಾಕರ ಭಟ್ ಸೇರಿದಂತೆ ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡವರ ಮೇಲೆ ಅನಗತ್ಯವಾಗಿ ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ.

ಖುದ್ದು ರಾಜ್ಯ ಸರ್ಕಾರವೇ " ದ್ವೇಷ ಭಾಷೆ" ಯ ಪ್ರಚಾರ ನಡೆಸುತ್ತಿದ್ದು, ನಿರ್ದಾಕ್ಷಿಣ್ಯ ಕ್ರಮವನ್ನು ಹಿಂದು ಸಂಘಟನೆಗೆ ಸೀಮಿತಗೊಳಿಸುತ್ತಿದೆ.
ಅಷ್ಟಕ್ಕೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ಹಾಗೂ ಹಿಂಸೆಗೆ ಪ್ರೇರಣೆ ನೀಡಿದವರು ಯಾರು ? ತಲವಾರು, ಕತ್ತಿ ಝಳಪಿಸಿ ಹತ್ಯೆಯ ಮಾತುಗಳನ್ನು ಆಡಿದವರನ್ನು ಪೊಲೀಸರು ಏಕೆ ಮುಟ್ಟುತ್ತಿಲ್ಲ ?

ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದವರಿಗೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ರವಾನಿಸಿದವರ ಮೇಲೆ ಮಾತ್ರ ನಿಮ್ಮ ಕಾನೂನು‌ ಕ್ರಮವೇ ?’ ಎಂದು ಸುನಿಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Mangaluru: ಮುಸ್ಲಿಮರ ಆಕ್ರೋಶಕ್ಕೆ ಬೆದರಿ ಹಿಂದೂ ಮುಖಂಡರ ವಿರುದ್ಧ ಸರ್ಕಾರದಿಂದ ಕೇಸ್, ನೋಟಿಸ್