ಮದ್ಯದ ಮತ್ತಿನಲ್ಲಿ ಪ್ರಿಯತಮೆಗೆ ಏನ್ ಮಾಡ್ದಾ ನೋಡಿ!?

Webdunia
ಮಂಗಳವಾರ, 28 ಡಿಸೆಂಬರ್ 2021 (14:20 IST)
ಭೋಪಾಲ್ : ವ್ಯಕ್ತಿಯೊಬ್ಬ ಮದ್ಯಕ್ಕೆ 200 ರೂ. ಹಣ ನೀಡದ ಕಾರಣ ಲಿವ್-ಇನ್ ರಿಲೆಷನ್ಶಿಪ್ನಲ್ಲಿದ್ದ ಗೆಳತಿಯ ಮೂಗನ್ನು ಕೊಡಲಿಯಿಂದ ಕತ್ತರಿಸಿದ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಬಮಂಗಾವ್ನಲ್ಲಿ ನಡೆದಿದೆ.
 
ಸೋನು (35) ಹಲ್ಲೆಗೊಳಗಾದ ಮಹಿಳೆ. ಸೋನು ತನ್ನ ಪ್ರೇಮಿ ಲವಕುಶ್ ಜೊತೆ 2 ವರ್ಷ ಲಿವ್-ಇನ್ ರಿಲೆಷನ್ಶಿಪ್ನಲ್ಲಿದ್ದಳು. ಮಹಿಳೆಯ ಪತಿ 8 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದನು.

ಆ ಬಳಿಕದಿಂದ ಆಕೆ ಹೊಲ-ಗದ್ದೆಯಲ್ಲಿ ಕೆಲಸ ಮಾಡುತ್ತಾ ತನ್ನ ಜೀವನವನ್ನು ಸಾಗಿಸುತ್ತಿದ್ದಳು. ಆದರೆ ಆಕೆಯ ಪ್ರೇಮಿ ಸದಾ ಮದ್ಯದ ಅಮಲಿನಲ್ಲಿರುತ್ತಿದ್ದು, ಯಾವುದೇ ಕೆಲಸ ಕಾರ್ಯವಿಲ್ಲದೆ ಅಲೆದಾಡುತ್ತಿದ್ದನು. 

ಶನಿವಾರ ಬೆಳಗ್ಗೆ ಮದ್ಯದ ಅಮಲಿನಲ್ಲಿದ್ದ ಆತ, ಮತ್ತೆ ಕುಡಿಯಲು ಅವಳ ಹತ್ತಿರ ಹಣ ಕೇಳಿದ್ದಾನೆ. ಆದರೆ ಸೋನು ಕೂಲಿಗಾಗಿ ಅವರಿವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದು, ಅವಳ ಜೀವನ ದುಡಿದ ಕೂಲಿಯ ಮೇಲೆ ನಡೆಯುತ್ತಿತ್ತು.

ಆದ ಕಾರಣ ಪ್ರೇಮಿಗೆ ಹಣ ಕೊಡಲು ಆಕೆ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಲವಕುಶ್ ಅಲ್ಲೇ ಇದ್ದ ಕೊಡಲಿ ತೆಗೆದುಕೊಂಡು ಆಕೆಯ ಮೂಗನ್ನು ಕತ್ತರಿಸಿ ಬಿಟ್ಟಿದ್ದಾನೆ.
ಘಟನೆಯಿಂದ ಗಂಭೀರಗಾಯಗೊಂಡ ಮಹಿಳೆಯನ್ನು ಸ್ಥಳೀಯ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಬಾಂಬ್ ಬೆದರಿಕೆ

ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್

ಹೈಕಮಾಂಡ್ ಮುಂದೆ ಡಿಕೆ ಶಿವಕುಮಾರ್ ಇಟ್ಟಿರುವ ನಾಲ್ಕು ಡಿಮ್ಯಾಂಡ್ ಗಳೇನು

ಆಂಧ್ರದಲ್ಲಿ 26 ಮಂದಿಯ ಹತ್ಯೆಗೆ ಕಾರಣವಾಗಿದ್ದ ನಕ್ಸಲ್‌ ಮದ್ವಿ ಹಿದ್ಮಾ ಎನ್‌ಕೌಂಟರ್‌ಗೆರ ಬಲಿ

ತಂದೆಗೆ ಹೊಡೆಯುತ್ತಿದ್ದ ಕಳ್ಳನ ಮನಸ್ಸು ಒಂದೇ ಕ್ಷಣದಲ್ಲಿ ಬದಲಾಯಿಸಿ ಮಗಳು: ಮನಕಲಕುವ ವಿಡಿಯೋ

ಮುಂದಿನ ಸುದ್ದಿ
Show comments