ನೈಟ್ ಕರ್ಫ್ಯೂ ಹೇರಿಕೆಗೆ ಕ್ಷಣಗಣನೆ..!

Webdunia
ಮಂಗಳವಾರ, 28 ಡಿಸೆಂಬರ್ 2021 (14:08 IST)
ಬೆಂಗಳೂರು : ಕೋವಿಡ್ ನಿಯಂತ್ರಣಕ್ಕಾಗಿ ಮಂಗಳವಾರ ರಾತ್ರಿಯಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯದಲ್ಲಿ ನೈಟ್ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ.

ಇದು ಹೋಟೆಲ್, ವ್ಯಾಪಾರ, ಸಾರಿಗೆ ಸೇರಿದಂತೆ ಹಲವು ವಲಯಗಳ ಮೇಲೆ ಭಾರಿ ಹೊಡೆತ ನೀಡಲಿದ್ದು, ಹೀಗಾಗಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜತೆಗೆ ನಿರ್ಬಂಧಗಳ ಸಡಿಲಿಕೆಗೆ ಒತ್ತಡ ಹೆಚ್ಚಾಗಿದೆ.

ಎರಡು ಬಾರಿಯ ಲಾಕ್ಡೌನ್, ಹಲವು ಬಾರಿ ಎದುರಾದ ನೈಟ್ ಕರ್ಫ್ಯೂಗಳಿಂದ ಈಗಾಗಲೇ ಭಾರಿ ಸಂಕಷ್ಟದಲ್ಲಿರುವ ಆತಿಥ್ಯ, ಉದ್ಯಮ ಕ್ಷೇತ್ರಗಳು ಒಂದಿಷ್ಟು ಚೇತರಿಕೆ ಕಾಣುತ್ತಿವೆ. ಈ ಬಾರಿಯ ಹೊಸ ವರ್ಷಾಚರಣೆಯ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದವು.

ರಾಜ್ಯ ಸರಕಾರ ಡಿಸೆಂಬರ್ 28ರಿಂದ ಜನವರಿ 7 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿದ್ದರೆ, ಡಿಸೆಂಬರ್ 30 ರಿಂದ ಜನವರಿ 4ರವರೆಗೆ ಹೋಟೆಲ್, ಪಬ್, ಬಾರ್ಗಳಲ್ಲಿ ಶೇ. 50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಿದೆ.

ಸಭೆ ಸಮಾರಂಭ, ರಾಜಕೀಯ ಸಮಾವೇಶ, ಸಿನಿಮಾ ಮಂದಿರ, ಸಾರ್ವಜನಿಕ ಸಾರಿಗೆಯಲ್ಲಿ ಯಾವುದೇ ನಿರ್ಬಂಧವಿಲ್ಲ. ಕೇವಲ ಕೆಲವೇ ಉದ್ಯಮಗಳನ್ನು ಮಾತ್ರ ಗುರಿಯಾಗಿಸಿಕೊಂಡು ನಿಷೇಧಾಜ್ಞೆ ಹೇರುವುದು ಎಷ್ಟು ಸರಿ ಎಂದು ಉದ್ಯಮಿಗಳು ಸರಕಾರವನ್ನು ಪ್ರಶ್ನಿಸಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸರ್ಕಾರದ ಸುಳ್ಳಿನ ಕಂತೆಗೆ ರಾಜ್ಯಪಾಲರು ಧ್ವನಿಯಾಗಬೇಕು ಎಂಬ ನಿಯಮ ಸಂವಿಧಾನದಲ್ಲಿ ಇಲ್ಲ: ಆರ್. ಅಶೋಕ್

ಸಂಪೂರ್ಣ ವಿದ್ಯುತ್ ಚಾಲಿತ ಇಂಟರ್ ಸಿಟಿ ಬಸ್ ಗೆ ಫ್ರೆಶ್ ಬಸ್ ಒಡಂಬಡಿಕೆ

ಅಧಿವೇಶನದಲ್ಲಿ ರಾಜ್ಯಪಾಲರನ್ನು ಭಾಷಣ ಮಾಡಿಸುವ ಕಾಂಗ್ರೆಸ್ ಉದ್ದೇಶ ಇದೇ ಆಗಿತ್ತು: ಬಿವೈ ವಿಜಯೇಂದ್ರ

ಕೇರಳ ದೀಪಕ್ ಆತ್ಮಹತ್ಯೆ ಪ್ರಕರಣ, ಆರೋಪಿ ಶಮ್ಜಿತಾ ಮುಸ್ತಫಾಗೆ ಬಿಗ್‌ ಶಾಕ್

ಕೇಂದ್ರದ ಯೋಜನೆಗೆ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ಆರ್‌ ಅಶೋಕ್

ಮುಂದಿನ ಸುದ್ದಿ
Show comments