Select Your Language

Notifications

webdunia
webdunia
webdunia
webdunia

ಜಾತ್ಯಾತೀತವಾದ ಕಾಂಗ್ರೆಸ್ ಪಕ್ಷದ ಡಿಎನ್‌ಎ : ರಾಹುಲ್ ಗಾಂಧಿ

ಜಾತ್ಯಾತೀತವಾದ ಕಾಂಗ್ರೆಸ್ ಪಕ್ಷದ ಡಿಎನ್‌ಎ : ರಾಹುಲ್ ಗಾಂಧಿ
delhi , ಸೋಮವಾರ, 13 ನವೆಂಬರ್ 2023 (15:22 IST)
ಜಾತ್ಯಾತೀತವಾದ ಕಾಂಗ್ರೆಸ್ ಪಕ್ಷದ ರಕ್ತದಲ್ಲಿದೆ ಅದನ್ನು ಯಾರು ತೆಗೆದುಹಾಕಲು ಸಾಧ್ಯವಿಲ್ಲ. ಜಾತ್ಯಾತೀತವಾದ ಕಾಂಗ್ರೆಸ್ ಪಕ್ಷದ ಡಿಎನ್‌ಎ ಆಗಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸೋಲಿಸುವುದು ಮಾತ್ರವಲ್ಲದೇ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಧೂಳಿಪಟ ಮಾಡುತ್ತೇವೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ.
 
ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಬಿಜೆಪಿ ಮತ್ತು ಅದರ ಮಾರ್ಗದರ್ಶಿ ಸಂಸ್ಥೆಯಾದ ಆರೆಸ್ಸೆಸ್‌ನ್ನು ಧ್ವಂಸಗೊಳಿಸಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.  
 
ಬಿಜೆಪಿ ಮತ್ತು ಆರೆಸ್ಸೆಸ್‌ನಿಂದ ದೇಶದ ಜನತೆ ಅನಗತ್ಯವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಆಕ್ರಮಣಕಾರಿ ಪ್ರಚಾರದ ಮೂಲಕ ಕಾಂಗ್ರೆಸ್ ತಕ್ಕ ಪಾಠಕಲಿಸಲಿದೆ ಎಂದರು.
 
ಆಯೋಜಿಸಲಾದ ಎರಡು ದಿನಗಳ ರಾಷ್ಟ್ರೀಯ ಸಮ್ಮೆಳನದಲ್ಲಿ ಮಾತನಾಡಿದ ರಾಹುಲ್, ಮುಂಬರುವ ದಿನಗಳಲ್ಲಿ ಎದುರಾಗುವ ಸಮಸ್ಯೆಗಳು ಬೃಹದಾಕಾರವಾಗಿರುವುದರಿಂದ ಕಾಂಗ್ರೆಸ್, ಆರೆಸ್ಸೆಸ್‌ನೊಂದಿಗೆ ಹೋರಾಡುವುದಿಲ್ಲ ಎಂದು ಹೇಳುವುದು ಸರಿಯಲ್ಲ ಎಂದರು. 
 
ಆರೆಸ್ಸೆಸ್‌ನಿಂದ ದೇಶದ ಜನತೆಯ ಸ್ವಾತಂತ್ರ್ಯ, ಅಭಿವೃದ್ಧಿ, ಜಾತ್ಯಾತೀತವಾದ, ಸಾಮಾಜಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ನಾಶವಾಗಲಿವೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೇರೆಯವರು ಸಿಡಿಸಿದ ಪಟಾಕಿಯಿಂದ ಟೈಲರ್ ಹಾಗೂ ಯುವಕನಿಗೆ ಗಾಯ