Select Your Language

Notifications

webdunia
webdunia
webdunia
webdunia

೨೦೨೪ರ ಮಹಾಸಮರದ ಹೊತ್ತಿಗೆ ರಾಜ್ಯ ರಾಜಕೀಯದಲ್ಲಿ ಏನಾಗುತ್ತೋ...?

೨೦೨೪ರ ಮಹಾಸಮರದ ಹೊತ್ತಿಗೆ ರಾಜ್ಯ ರಾಜಕೀಯದಲ್ಲಿ ಏನಾಗುತ್ತೋ...?
bangalore , ಭಾನುವಾರ, 12 ನವೆಂಬರ್ 2023 (19:26 IST)
ಕಾಂಗ್ರೆಸ್‌ನಲ್ಲಿ ದಿನಕ್ಕೊಂದು ಕ್ಷಣಕ್ಕೊಂದು ರಾಜಕೀಯ ಬೆಳವಣಿಗೆಗಳು ಆಗ್ತಾ ಇರೋದನ್ನ ನೋಡಿದ್ರೆ, ಲೋಕಸಭಾ ಚುನಾವಣೆಯ ಹೊತ್ತಿಗೆ ಇನ್ನೇನು ಆಗಿ ಬಿಡುತ್ತೋ, ಅನ್ನುವ ಗೊಂದಲ ಈಗಿನಿಂದಲೇ ಸೃಷ್ಟಿಯಾದಂತಿದೆ.. ಒಂದು ಕಡೆ ಸ್ವಪಕ್ಷದಲ್ಲೇ ಎದುರಾಗ್ತಾ ಇರುವ ಸಮಸ್ಯೆಗಳು, ಆತಂರಿಕ ಕಚ್ಚಾಟಗಳು, ಭಿನ್ನಮತ ಚಟುವಟಿಕೆಗಳು, ಪರಸ್ಪರ ಟೀಕಾಪ್ರಹಾರಗಳು....ಹೀಗೆ ಒಂದಾ ಎರಡಾ ಹೇಳಿ.

ಆದರೂ ಕಾಂಗ್ರೆಸ್‌ನಲ್ಲಿ ಒಂದು ತಿಂಗಳಿನಿAದ ನಡೆದು ಬಂದಿದ್ದ, ಹೈಡ್ರಾಮಗಳಿಗೆ, ಡೆಲ್ಲಿಯ ಹೈಕಮಾಂಡ್ ನಾಯಕರೇ ಎದ್ರೋ, ಬಿದ್ರೋ ಅಂತ ಓಡೋಡಿ ಬಂದು, ಒಂದು ಹಂತಕ್ಕೆ ಪಕ್ಷದಲ್ಲಿ ಆಗ್ತಾ ಇದ್ದ ಡ್ಯಾಮೇಜುಗಳಿಗೆ ತಿಲಾಂಜಲಿ ಇಟ್ಟು ಹೋಗಿದ್ದರು. ಆದರೂ ಗೊತ್ತಿಲ್ಲ, ಮತ್ಯಾವಾಗ ಮತ್ತದೇ ಟಾಕ್ ವಾರ್‌ನ ಪ್ರಹಸನ ಶುರುವಾಗುತ್ತೋ..?

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಅದಾಗಲೇ ಆರು ತಿಂಗಳುಗಳೇ ಕಳೆದು ಹೋಗಿವೆ ನಿಜ. ಹಾಗಾಂತ ಪಕ್ಷದಲ್ಲಿ ಇದುವರೆಗೂ ನಡೆಯುತ್ತಾ ಬಂದಿದ್ದ, ಕೆಲವೊಂದು ಅನಿರೀಕ್ಷಿತ ಬೆಳವಣಿಗೆಗಳು, ೨೦೨೪ರ ಹೊತ್ತಿಗೆ ಇನ್ಯಾವ ಸ್ವರೂಪವನ್ನು ಪಡೆದುಕೊಳ್ಳುತ್ತೋ ಅಂತ ಗೇಸ್ ಮಾಡೋದು ಕಷ್ಟ..?

ಮತ್ತೊಂದು ಕಡೆ ಈಗಾಗಲೇ ರಾಜ್ಯದಲ್ಲಿ ಆಪರೇಷನ್ ಹಸ್ತ, ಆಪರೇಷನ್ ಕಮಲದದಂತಹ ಎರಡು ಬಗೆಯ ರಾಜಕೀಯ ಅಪಸವ್ಯಗಳು ರಾಜ್ಯ ರಾಜಕಾರಣದಲ್ಲಿ ಸಾಗಿ ಹೋಗುತ್ತಿವೆ. ಬಿಜೆಪಿಯಿಂದ ಆಪರೇಷನ್ ಕಮಲದ ಗುಮ್ಮ ಆವರಿಸಿಕೊಂಡರೆ, ಅತ್ತ ಆಪರೇಷನ್ ಹಸ್ತದ ಕೆಲಸವೂ, ಡಿಸಿಎಂ ಡಿಕೆಶಿಯ ಸಾರಥ್ಯದಲ್ಲಿಯೇ ಬಿರುಸುಪಡೆದುಕೊಂಡಿದೆ ಅನ್ನುವ ಮಾತಿದೆ. 
 
ಈ ಎಲ್ಲದರ ನಡುವೆ ಬಿಜೆಪಿಯಲ್ಲಿ ಏನಾಗ್ತಿದೆಯೋ, ಅದೇ ವಿದ್ಯಮಾನಗಳು ಈ ಕಡೆ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿಯೂ ಆಗ್ತಾ ಇರೋದು ಗುಟ್ಟಾಗಿ ಏನು ಉಳಿದಿಲ್ಲ. ಡಿಕೆಶಿಯೇ ನೇರವಾಗಿ ನವೆಂಬರ್ ೧೫ರ ನಂತರ ಏನಾಗುಬಹುದು ಅನ್ನೋದರ ಸೂಚನೆಯನ್ನು ಕೊಟ್ಟಿದ್ದಾರೆ. ಹಾಗಾಗಿ ೨೦೨೪ರ ಸಮರದ ಹೊತ್ತಿಗೆ ಎರಡು ಪಕ್ಷಗಳಲ್ಲಿ ಅದ್ಯಾವೆಲ್ಲಾ ಪೊಲಿಟಿಕಲ್ ಹೈಡ್ರಾಮಾಗಳು ನಡೆದು ಹೋಗಿ ಬಿಡಬಹುದೋ, ಅನ್ನೋದು ಅವತ್ತಿನ ರಾಜಕೀಯ ಕುತೂಹಲಕ್ಕೆ ಕಾರಣವಾಗುತ್ತೆ....
 
ಈ ಹಿಂದೆ ಆಪರೇಷನ್ ಕಮಲದ ಅಸಲಿ ರಾಜಕಾರಣ, ಬಾಂಬೆವರೆಗೂ ಹೋಗಿ ಮುಟ್ಟಿತ್ತು. ಅಲ್ಲಿಂದಲೇ ೨೦೧೯ರ ಮೈತ್ರಿ ಸರ್ಕಾರವನ್ನು ಕೆಡುವೊದಕ್ಕೆ ದೊಡ್ಡ ಹುನ್ನಾರ ನಡೆದಿತ್ತು. ಕೊನೆಗೆ ಅದೇ ಬಾಂಬೆಯ ರೆಬೆಲ್ ನಾಯಕರ ಕುದುರೆ ವ್ಯಾಪಾರದ ಮಸಲತ್ತಿಗೆ, ಅಂದಿನ ಮೈತ್ರಿ ಸರ್ಕಾರ ಬಿದ್ದು ಹೋಗಿತ್ತು... ಆದ್ರೆ ಇವಾಗ ಕಥೆ ಬೇರೆಯೇ ಇದೆ, ಕಾಂಗ್ರೆಸ್ ಸರ್ಕಾರಕ್ಕೆ ಸ್ವಪಕ್ಷದಲ್ಲೇ ಗಂಡಾAತರ, ಕಂಟಕ ಎದುರಾಗಬಹುದು ಅನ್ನುವ ಹೊಸ ಟೆನ್ಷನ್ ಸ್ವತಃ ಕಾಂಗ್ರೆಸ್ ಹೈಕಮಾಂಡ್‌ಗೆ ಕಾಡ್ತಿದೆ. ಯಾಕೆಂದರೇ, ಕಾಂಗ್ರೆಸ್‌ನ ೫೦ ಹೆಚ್ಚು ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಎನ್ನಲಾಗ್ತಿದೆ. ಅಲ್ಲಿಗೆ ಕೊನೆಗೆ ಗೆಲ್ಲೋದು ಆಪರೇಷನ್ ಕಮಲನಾ..? ಇಲ್ಲ ಆಪರೇಷನ್ ಹಸ್ತನಾ..? ಬಟ್ ನಾಟ್‌ಶ್ಯೂರ್...?

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರೋರಾತ್ರಿ 7 ಕೋಟಿ ಒಡೆಯನಾದ ಪಾಕಿಸ್ತಾನ ಮೀನುಗಾರ